ತಮಿಳುನಾಡಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತ

Prasthutha|

ಚೆನ್ನೈ: ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆ ನಿಮಿತ್ತ ತಮಿಳುನಾಡಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಗುರುವಾರ ನಡೆದಿದೆ.

- Advertisement -

19ರಿಂದ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಭದ್ರತೆಗಾಗಿ ಕರ್ನಾಟಕದಿಂದ ಪೊಲೀಸ್​ ಅಧಿಕಾರಿಗಳು ಚುನಾವಣಾ ಕಾರ್ಯಕ್ಕಾಗಿ ತೆರಳಿದ್ದರು. ಆದರೆ ತಮಿಳುನಾಡು ಸರ್ಕಾರಿ ಬಸ್​ ಪೊಲೀಸ್​ ಅಧಿಕಾರಿಗಳಿದ್ದ ಜೀಪ್​ಗೆ ಡಿಕ್ಕಿ ಹೊಡೆದ ಪರಿಣಾಮ ಕೆಎಸ್​ಆರ್​ಪಿ ಮೂರನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಟಿ ಪ್ರಭಾಕರ ಹಾಗೂ ತಮಿಳುನಾಡು ಕಾನ್​ಸ್ಟೇಬಲ್​ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ಲ ದುರಂತ ನಡೆದಿದೆ.


ತಮಿಳುನಾಡು ಚುನಾವಣೆಯಲ್ಲಿ ಭದ್ರತೆಗೆ ಸುಮಾರು 800 ಮಂದಿ ಕೆಎಸ್ ಆರ್ ಪಿ ಸಿಬ್ಬಂದಿ ತಮಿಳುನಾಡಿಗೆ ಹೋಗಿದ್ದರು. ತಮಿಳುನಾಡಿನ ತಿರುವಣಮಲೈ ಬಳಿ ಭದ್ರತಾ ಸಿಬ್ಬಂದಿ ಇದ್ದ ಜೀಪ್​ಗೆ ಬಸ್​ವೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಮಾಂಡೆಂಟ್ ಟಿ ಪ್ರಭಾಕರ್ ಹಾಗೂ ತಮಿಳುನಾಡು ಕಾನ್​ಸ್ಟೇಬಲ್ ದಿನೇಶ್​ ​ ಸಾವನ್ನಪ್ಪಿದರೆ, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾನ್ಸ್ ಟೇಬಲ್ ವಿಠಲ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Join Whatsapp