ಟಿಪ್ಪು ಸುಲ್ತಾನ್ ವಿಜಯದ ವರ್ಣಚಿತ್ರ ಬರೋಬ್ಬರಿ 6.28 ಕೋಟಿಗೆ ಮಾರಾಟ !

Prasthutha|

ಲಂಡನ್:  1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ ಬುಧವಾರ ಲಂಡನ್ ನಲ್ಲಿ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ.

- Advertisement -

ಈ ವರ್ಣಚಿತ್ರ  ಎರಡನೇ ಆಂಗ್ಲೋ- ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ ‘ಪೊಲ್ಲಿಲೂರ್ ಕದನದ ದಿಗ್ವಿಜಯದ ಸಂಕೇತವಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಇಸ್ಲಾಮಿಕ್ ವರ್ಲ್ಡ್ ಹಾಗೂ ಭಾರತೀಯರ ಕೇಂದ್ರಬಿಂದುವಾಗಿತ್ತು.  ವಿಜಯದ ಸಂಕೇತ ಹಾಗೂ ವರ್ಣಕಲೆಯಲ್ಲಿ ಮೂಡಿಬಂದಿರುವ ವರ್ಣಚಿತ್ರ ದಾಖಲೆಯ 6. 28 ಕೋಟಿ ರೂ.ಗೆ ಹರಾಜು ಹಾಕಲಾಗಿದೆ. 

ಟಿಪ್ಪು ಸುಲ್ತಾನ್ 1784ರಲ್ಲಿ ಸೆರಿಂಗಪಟ್ಟಣಂನಲ್ಲಿ ಹೊಸದಾಗಿ ನಿರ್ಮಿಸಲಾದ ದರಿಯಾ ದೌಲತ್ ಬಾಗ್ ನಲ್ಲಿ ಪೊಲ್ಲಿಲೂರ್ ಕದನದ ವರ್ಣಚಿತ್ರ ಮಾಡಿಸಿದರು ಎಂದು ತಿಳಿದು ಬಂದಿದೆ.

Join Whatsapp