ಗಾಝಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿ ಅಮೆರಿಕದಿಂದ ಹೊಸ ಸಂಧಾನ ಸೂತ್ರ

Prasthutha|

ಟೆಲ್‍ಅವೀವ್: ಗಾಝಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿ ಅಮೆರಿಕ ಹೊಸ ಸಂಧಾನ ಸೂತ್ರವೊಂದನ್ನು ಪ್ರಸ್ತಾವಿಸಿದೆ. ಈ ಪ್ರಸ್ತಾವನೆಯಲಿ ಹಮಾಸ್ ಬಿಡುಗಡೆಗೊಳಿಸುವ ಒತ್ತೆಯಾಳುಗಳಿಗೆ ಪ್ರತಿಯಾಗಿ ಇಸ್ರೇಲ್ ಬಿಡುಗಡೆಗೊಳಿಸಬೇಕಿರುವ ಪ್ಯಾಲೆಸ್ತೀನ್ ಖೈದಿಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಎಂದು ಇಸ್ರೇಲ್‍ನ ಅಧಿಕಾರಿ ಹೇಳಿದ್ದಾರೆ.

- Advertisement -

ಖತರ್‌ನ ದೋಹಾದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್‍ನ ಮುಖ್ಯಸ್ಥ ಡೇವಿಡ್ ಬರ್ನೆಯ್ ನೇತೃತ್ವದಲ್ಲಿ ಇಸ್ರೇಲ್ ನಿಯೋಗ ಪಾಲ್ಗೊಂಡಿದೆ. ಅಮೆರಿಕದ ಸಿಐಎ ನಿರ್ದೇಶಕ ವಿಲಿಯಂ ಬನ್ರ್ಸ್, ಖತರ್ ಮತ್ತು ಈಜಿಪ್ಟ್‍ನ ಅಧಿಕಾರಿಗಳು ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಮೆರಿಕದ ಪ್ರಸ್ತಾವನೆಗೆ ನಮ್ಮ ಒಪ್ಪಿಗೆಯಿದೆ, ಇದೀಗ ಚೆಂಡು ಹಮಾಸ್‍ನ ಅಂಗಳದಲ್ಲಿದೆ ಎಂದು ಇಸ್ರೇಲ್ ಅಧಿಕಾರಿ ಹೇಳಿದ್ದಾರೆ.

- Advertisement -

ಈ ತಿಂಗಳ ಆರಂಭದಲ್ಲಿ ಹಮಾಸ್‍ನ ಉನ್ನತ ಮುಖಂಡರು ಮುಂದಿಟ್ಟ ಪ್ರಸ್ತಾವನೆಯಂತೆ `ಹಮಾಸ್‍ನ ಒತ್ತೆಸೆರೆಯಲ್ಲಿರುವ ಮಹಿಳೆಯರು, ಅಪ್ರಾಪ್ತ ವಯಸ್ಕರು, ಹಿರಿಯ ನಾಗರಿಕರ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಸುಮಾರು 1000 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿತ್ತು. ಇಸ್ರೇಲ್ ಆ ಷರತ್ತನ್ನು ಇಸ್ರೇಲ್ ತಿರಸ್ಕರಿಸಿತ್ತು.

Join Whatsapp