ಲಕ್ನೋ: ದೀಪಾವಳಿ ಹಬ್ಬದ ಕುರಿತು ವಾಟ್ಸಾಪ್ ನಲ್ಲಿ ವ್ಯಂಗ್ಯ ದೃಶ್ಯಾವಳಿಗಳನ್ನು ಹಂಚಿದ್ದಾನೆಂದು ಆರೋಪಿಸಿ ಸಂಘಪರಿವಾರ ಕಾರ್ಯಕರ್ತರು ಮುಸ್ಲಿಮ್ ಯುವಕನ ಮೇಲೆ ತನ್ನ ಕುಟುಂಬದ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ದೀಪಾವಳಿ ಹಬ್ಬದ ಕುರಿತು ವ್ಯಂಗ್ಯಮಾಡಿದ ಪೋಸ್ಟ್ ಅನ್ನು ವಾಟ್ಸಾಪ್ ನಲ್ಲಿ ಹಂಚಿದ್ದಾನೆ ಎಂದು ಆರೋಪಿಸಿ, ಮುಸ್ಲಿಮ್ ಯುವಕನ ನಿವಾಸದ ಹೊರಗೆ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರ ತಂಡವೊಂದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಸಂಘಪರಿವಾರ ಭಾರತದಾದ್ಯಂತ ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಹಿಂದುಳಿದ ಸಮುದಾಯವನ್ನು ಗುರಿಯಾಗಿಸಿ ಪ್ರತಿನಿತ್ಯ ಗುಂಪುಹತ್ಯೆ, ಹಿಂಸಾಚಾರದಂತಹ ಘಟನೆಗಳು ವರದಿಯಾಗುತ್ತಲೇ ಇದೆ.