ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಲಾರಿ ಚಾಲಕನ ಮೃತದೇಹ ಪತ್ತೆ

Prasthutha|

ಚಿತ್ರದುರ್ಗ: ಹೊಳಲ್ಕೆರೆ ಪೊಲೀಸ್ ಠಾಣೆ ಬಳಿಯಿಂದ ನಾಪತ್ತೆಯಾಗಿದ್ದ ಲಾರಿ ಚಾಲಕ ಬಸವಂತಕುಮಾರ್(37) ಸ್ಮಶಾನದ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

- Advertisement -

ಮೃತ ಬಸವಂತಕುಮಾರ್ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ನಿವಾಸಿಯಾಗಿದ್ದು, ಜೂ.5ರಂದು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಈತನ ಲಾರಿಯನ್ನ ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿ ಠಾಣೆಗೆ ತಂದಿದ್ದರು. ಬಳಿಕ ದಂಡ ಕಟ್ಟಲು ಹಣವಿಲ್ಲದೆ ರಾತ್ರಿ ಲಾರಿಯಲ್ಲೇ ಮಲಗಿದ್ದ. ಇದಾದ ಮಾರನೇ ದಿನ ಬಸವಂತಕುಮಾರ್ ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬಸ್ಥರು ಹೊಳಲ್ಕೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೃತನ ಸಂಬಂಧಿಕರು ಬಸವಂತಕುಮಾರ್ ಪತ್ತೆಗೆ ಆಗ್ರಹಿಸಿ ಹೊಳಲ್ಕೆರೆ ಠಾಣೆ ಪೊಲೀಸರ ವಿರುದ್ದ ಧರಣಿ ಕೂಡ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಪಿ ಕೆ.ಪರಶುರಾಮ್ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದರು.