ಬೆಂಗಳೂರು ವಿವಿ ಆವರಣದೊಳಗೆ ದೇವಾಲಯ ನಿರ್ಮಾಣ: ಆಕ್ರೋಶಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ

Prasthutha|

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಯಲದ ಆವರಣದಲ್ಲಿ ಅಕ್ರಮವಾಗಿ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಕಿಡಿಗೇಡಿಗಳು ಎಂದು ಹೀಯಾಳಿಸಿದ ಬಿಬಿಎಂಪಿ ಆಯುಕ್ತರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆಕ್ರೋಶಿತ ವಿದ್ಯಾರ್ಥಿಗಳು ಮತ್ತು ಅದ್ಯಾಪಕರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ವಿವಿಯ ಆವರಣದಲ್ಲಿ ದೇವಸ್ಥಾನದ ಬದಲು ಗ್ರಂಥಾಲಯವನ್ನು ನಿರ್ಮಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವಿವಿಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮನೋಜ್ ಅವರು, ವಿವಿ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ದೇವಾಲಯ ವಿರುದ್ಧ ಪ್ರತಿಭಟಿಸಿದವರನ್ನು ಬಿಬಿಎಂಪಿ ಆಯುಕ್ತರು ಕಿಡಿಗೇಡಿ ಎಂದು ಕರೆದಿದ್ದಾರೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದರು.

- Advertisement -

ಸರ್ಕಾರಿ ಹುದ್ದೆಯಲ್ಲಿರುವ ಅಧ್ಯಾಪಕರನ್ನು ಕಿಡಿಗೇಡಿಗಳೆಂದು ಕರೆದ ಬಿಬಿಎಂಪಿ ಆಯುಕ್ತರನ್ನು ಸಸ್ಪೆಂಡ್ ಮಾಡಬೇಕು ಮತ್ತು ಅಕ್ರಮ ದೇವಾಲಯ ನಿರ್ಮಾಣವನ್ನು ತಡೆಯುವಂತೆ ಆಗ್ರಹಿಸಿ ನಾವು ಹೋರಾಡುತ್ತಿದ್ದೇವೆ ಎಂದು ಮನೋಜ್ ತಿಳಿಸಿದ್ದಾರೆ.



Join Whatsapp