ಸಂಭ್ರಮಾಚರಣೆ ವೇಳೆ ಕಂಬದಿಂದ ಬಿದ್ದ ವ್ಯಕ್ತಿ

Prasthutha|

ಲಂಡನ್​: ಭಾರತ ಟಿ 20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವಿಶ್ವದಾದ್ಯಂತ ಆಚರಿಸಲಾಗಿತ್ತು. ಆದರೆ ಲಂಡನ್‌‌ನಲ್ಲಿ ಸಂಭ್ರಮಾಚರಣೆ ವೇಳೆ ಅನಾಹುತವೊಂದು ನಡೆದಿದೆ. ತ್ರಿವರ್ಣ ಧ್ವಜವನ್ನು ಕಟ್ಟಲು ಪ್ರಯತ್ನಿಸುತ್ತಿರುವಾಗ ಕ್ರಿಕೆಟ್​ ಅಭಿಮಾನಿ ಕಂಬದಿಂದ ಬಿದ್ದು ಗಾಯಗೊಂಡಿದ್ದಾರೆ.

- Advertisement -

ಹೊರಗಿನ ಕಂಬದಲ್ಲಿ ತ್ರಿವರಣ ಧ್ವಜ ಹಾರಿಸಲು ಅಭಿಮಾನಿಯೊಬ್ಬ ಮೇಲೇರಿದ. ಆದರೆ ಆತ ಆಯತಪ್ಪಿ ಕಂಬದಿಂದ ಬೀಳುತ್ತಾನೆ. ಇದರ ವೀಡಿಯೋ ಈಗ ವೈರಲ್​ ಆಗಿದೆ.

ಬಿದ್ದ ಅಭಿಮಾನಿಯ ಮುಖದ ಮೇಲೆ ಗಾಯಗಳಾಗಿದ್ದು, ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡು ಮೇಲೆದ್ದು ನಡೆದು ಹೋಗಿದ್ದಾನೆ.

- Advertisement -

ಬ್ರಿಡ್ಜ್‌ಟೌನ್‌ನಲ್ಲಿ ಭಾರತ 13 ವರ್ಷಗಳ ನಂತರ ವಿಶ್ವಕಪ್ ಗೆದ್ದು ಬೀಗಿದೆ.

Join Whatsapp