ಹಲ್ಲೆಗೆ ಸಂಬಂಧಿಸಿದ ಸಾಕ್ಷಿದಾರ ಅಬ್ದುಲ್ ಲತೀಫ್ ಕಲ್ಲಾಪು ಎಂಬವರ ಮೇಲೆ ಪುನರಾವರ್ತಿಸಿದ ತೀವ್ರ ರೀತಿಯ ಹಲ್ಲೆ | ಉಳ್ಳಾಲ ಪೊಲೀಸರ ನಿರ್ಲಕ್ಷ್ಯ?

Prasthutha|

ಉಳ್ಳಾಲ: ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನ್ಯಾಯಾಲಯದಲ್ಲಿದ್ದು, ಪ್ರಕರಣವು ಸಾಕ್ಷಿ ಹಂತದಲ್ಲಿರುವಾಗ ಈ ಪ್ರಕರಣದ ಪ್ರಮುಖ ಆರೋಪಿ ಉಸ್ಮಾನ್ ಕಲ್ಲಾಪುವಿನ ಸಹೋದರನ ಮಗ ರೌಡಿಶೀಟರ್ ಭಾತಿಶ್ ಕಲ್ಲಾಪು ಎಂಬವನು ಸಾಕ್ಷಿಧಾರ ಅಬ್ದುಲ್ ಲತೀಫ್ ಕಲ್ಲಾಪು ಎಂಬವರ ಮೇಲೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ನೆಪವೊಡ್ಡಿ ಮತ್ತೇ 6ನೇ ಬಾರಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.  ಹಲ್ಲೆಯಿಂದ ಅಬ್ದುಲ್ ಲತೀಫ್ ಎಂಬವರು ಗಂಭೀರವಾಗಿ ಗಾಯಗೊಂಡು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಕಲ್ಲಾಪು ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ  ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು,ಗಾಂಜಾದಂತಹ ಅಮಲು ಪದಾರ್ಥಗಳಿಂದ ಯುವಜನಾಂಗ ದೂರವಿರಲು ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು,ಸರಕಾರಿ ಸವಲತ್ತುಗಳನ್ನು ತೆಗೆಸಿಕೊಡುವುದು,ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ನೆರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಕಲ್ಲಾಪು ಎಂಬವರ ಮೇಲೆ ಸ್ವಾರ್ಥ ಮತ್ತು ರಾಜಕೀಯ ದುರುದ್ದೇಶದಿಂದ ಸತತ 6 ಬಾರೀ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

ಘಟನೆಯ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಹಲ್ಲೆ ನಡೆಸಿದ ಆರೋಪಿ ಭಾತಿಶ್ ಕಲ್ಲಾಪು ಎಂದಿನಂತೆ ಆಸ್ಪತ್ರೆಗೆ ದಾಖಲಾಗಿ ಪ್ರಕರಣವನ್ನು ದುರ್ಬಲಗೊಳಿಸಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಈ ಹಿಂದಿನ ಪ್ರಕರಣದಲ್ಲಿ ಆರೋಪಿಗಳಿಗೆ ಸ್ಥಳೀಯ ಶಾಸಕರ ಮತ್ತು ರಾಜಕೀಯ ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ಕಲ್ಲಾಪು ಪ್ರದೇಶದ ಹಲವಾರು  ಅಮಾಯಕರ ಮೇಲೆ ಧಾಳಿ, ಕೊಲೆಯತ್ನ, ಹಲ್ಲೆ, ಹಫ್ತಾವಸೂಲಿ ಸೇರಿದಂತೆ ಹಲವಾರು ಕುಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಇವರ ಗೂಂಡಾಗಿರಿ ಮತ್ತು ರಾಜಕೀಯ ಪ್ರಭಾವಕ್ಕೆ ಬೆದರಿ ಯಾರೂ ಕೂಡ ದೂರು ನೀಡುತ್ತಿಲ್ಲ. ಗೂಂಡಾ ಪಡೆಗಳಿಗೆ ಸಿಂಹಸ್ವಪ್ನವಾಗಿರುವ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರವರು ಇಂತಹ ದುಷ್ಟ ಶಕ್ತಿಗಳಿಗೆ ಕಾನೂನು ರೀತಿಯಲ್ಲಿ ತಕ್ಕ ಪಾಠಕಲಿಸಬೇಕಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.  

- Advertisement -