ಮಂಗಳೂರು | ಮಸ್ಕತ್’ಗೆ ಪ್ರಯಾಣಿಸಲು ಏರ್ಪೋರ್ಟ್’ಗೆ ತೆರಳುತ್ತಿದ್ದ ವ್ಯಕ್ತಿಗೆ ಥಳಿತ; ಮೂವರ ಬಂಧನ

Prasthutha|

ಮಂಗಳೂರು: ಮಸ್ಕತ್ ಪ್ರಯಾಣಿಸಲು ಕಾರಿನಲ್ಲಿ ಏರ್ಪೋರ್ಟ್’ಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಕಂದಾವರದಲ್ಲಿ ಐದು ಮಂದಿ ದುಷ್ಕರ್ಮಿಗಳ ತಂಡವೊಂದು ಕಾರನ್ನು ಅಡ್ಡಗಟ್ಟಿ ಥಳಿಸಿದ್ದು, ಬಳಿಕ ಅವರ ಪಾಸ್ಪೋರ್ಟ್, ನಗದು, ಮೊಬೈಲ್ ದೋಚಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತರನ್ನು ಉಪ್ಪಿನಂಗಡಿ ನಿವಾಸಿಗಳಾದ ನೌರೀಝ್, ನೌಶಾದ್ ಮತ್ತು ಗಂಜಿಮಠ ಬಡಗುಳಿಪಾಡಿಯ ಅಕ್ಬರ್ ಎಂದು ಗುರುತಿಸಲಾಗಿದೆ.

ನಾರ್ಲಪದವಿನ ಅಬ್ದುಲ್ ರಹ್ಮಾನ್ ಎಂಬವರು ಮೇ 23 ರಂದು ಮುಂಜಾನೆ 4.30ಕ್ಕೆ ಮಸ್ಕತ್’ಗೆ ಪ್ರಯಾಣಿಸಲು ಮಂಗಳೂರು ಏರ್ಪೋರ್ಟ್ ಗೆ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದರು. ಕಂದಾವರ ಪ್ರದೇಶ ತಲುಪಿದಾಗ ಸ್ವಿಫ್ಟ್ ಕಾರಿನಲ್ಲಿ ಬಂದ ಐವರು ಕಾರನ್ನು ಅಡ್ಡಗಟ್ಟಿ ಅಬ್ದುಲ್ ರಹ್ಮಾನ್ ರನ್ನು ಎಳೆದು ಹಾಕಿ ದೊಣ್ಣೆಯಿಂದ ಥಳಿಸಿದ್ದರಲ್ಲದೆ ಚಾಕುವಿನಿಂದ ಗಾಯಗೊಳಿಸಿದ್ದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ ಕಾರಿನೊಂದಿಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಆದೇಶ ಮೇರೆಗೆ ಡಿಸಿಪಿಗಳಾದ ಹರಿರಾಮ್ ಶಂಕರ್ಮ್ ದಿನೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ ಎನ್. ಮಹೇಶ್ ಕುಮಾರ್ ಮತ್ತು ಬಜ್ಪೆ ವೃತ್ತ ನಿರೀಕ್ಷಕ ರಾಘವ ಪಡೀಲ್, ಪಿ.ಎಸ್.ಐ.ಗಳಾದ ಪೂವಪ್ಪ, ಗುರುವಪ್ಪ, ಶಾಂತಿ, ಕಮಲಾ, ಎಎಸ್‌ಐಗಳಾದ ರಾಮ ಪೂಜಾರಿ ಮೇರಮಜಲು, ಸಂತೋಷ ಡಿ.ಕೆ. ಸುಳ್ಯ, ರಾಜೇಶ್, ಹೊನ್ನಪ್ಪ ಗೌಡ, ಪುರುಷೋತ್ತಮ್, ರೋಹಿತ್, ರಶೀದ್ ಶೇಖ್, ಮಂಜುನಾಥ, ಉಮೇಶ್ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.



Join Whatsapp