ಅಮೆರಿಕದಲ್ಲಿ ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ, ಕಾರು ಗುದ್ದಿ ಕೊಂದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Prasthutha|

ಹೂಸ್ಟನ್: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ 2020ರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಭೀಕರವಾಗಿ ಹತ್ಯೆ ಮಾಡಿದ ಭಾರತೀಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ದಂಪತಿಯ ಮಧ್ಯೆ ಸಂಬಂಧ ಹಳಿಸಿದ್ದರಿಂದ ಅದರಿಂದ ಪಾರಾಗಲು ಪತ್ನಿ ಮೆರಿನ್ ಜಾಯ್ ಯೋಜಿಸಿದ್ದಳು. ಇದರಿಂದ ರೊಚ್ಚಿಗೆದ್ದ ಪತಿ ಫಿಲಿಪ್ ಮ್ಯಾಥ್ಯೂ ಕ್ರೂರವಾಗಿ ಸಾಯಿಸಿದ್ದಾನೆ.

2020 ರಲ್ಲಿ ಬ್ರೋವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್‌ನಲ್ಲಿ 26 ವರ್ಷದ ಜಾಯ್ ನರ್ಸ್ ಆಗಿದ್ದರು. ಕೊಲೆಯಾಗಿ ಸಿಕ್ಕ‌ ಅವರ ದೇಹವನ್ನು 17 ಬಾರಿ ಇರಿಯಲಾಗಿತ್ತು. ಮಾತ್ರವಲ್ಲ, ಆಕೆಯ ಮೇಲೆ ಕಾರಿನಿಂದ ಗುದ್ದಲಾಗಿತ್ತು.

- Advertisement -

ಕೊಲೆಗೊಳಗಾಗುತ್ತಿರುವ ಜಾಯ್ ಸಹಾಯಕ್ಕೆ ಸಹೋದ್ಯೋಗಿಗಳು ಧಾವಿಸಿದಾಗ, ಜಾಯ್ ಅಳುತ್ತಾ ಇದ್ದಳು. ನನಗೆ ಮಗು ಇದೆ ಎಂದು ಬೇಡಿಕೊಳ್ಳುತ್ತಿದ್ದಳು. ಸಾಯುವ ಮುನ್ನ ಜಾಯ್​​ ತನ್ನ ಮೇಲೆ ದಾಳಿ ನಡೆಸಿದವರ ಗುರುತನ್ನು ಬಹಿರಂಗಪಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಮಾರಣಾಂತಿಕ ಆಯುಧದಿಂದ ಹಲ್ಲೆ ಮಾಡಿ, ಕಾರು ಓಡಿಸಿ ಸಾಯಿಸಿದ್ದೆ ಎಂದು ತನ್ನ ಅಪರಾಧವನ್ನು ಮ್ಯಾಥ್ಯೂ ಒಪ್ಪಿಕೊಂಡಿದ್ದ. ಹಾಗಾಗಿ ಬಿಡುಗಡೆಯ ಯಾವುದೇ ಸಾಧ್ಯತೆಯಿಲ್ಲದೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೊತೆಗೆ ಮಾರಣಾಂತಿಕ ಆಯುಧದಿಂದ ಆಕ್ರಮಣ ನಡೆಸಿದ್ದಕ್ಕಾಗಿ ಗರಿಷ್ಠ ಐದು ವರ್ಷಗಳ ಶಿಕ್ಷೆಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp