ರಾಜಸ್ಥಾನದ ಆಲ್ವಾರ್ ಯಾರ್ಡ್‌ನಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

Prasthutha|

ಜೈಪುರ: ರಾಜಸ್ಥಾನದ ಆಲ್ವಾರ್ ಯಾರ್ಡ್‌ನಲ್ಲಿ ಇಂದು ಬೆಳಗ್ಗೆ ಗೂಡ್ಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಬಳಿಕ ಹಳಿಯಲ್ಲಿದ್ದ ಬೋಗಿಗಳನ್ನು ತೆರವುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಬೆಳಗಿನ ಜಾವ 2.30ಕ್ಕೆ ಘಟನೆ ನಡೆದಿದೆ. ಯಾರ್ಡ್‌ನ ಒಂದು ಬದಿಯಲ್ಲಿ ಘಟನೆ ನಡೆದಿದ್ದು, ಸಂಚಾರಕ್ಕೆ ಯಾವುದೇ ತೊಂದರೆಯುಂಟಾಗಿಲ್ಲ ಎಂದು ವಾಯವ್ಯ ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.



Join Whatsapp