ವಿಮಾನದಲ್ಲಿ ಅರೆನಗ್ನಳಾಗಿ ಓಡಾಡಿ ವಿದೇಶಿ ಮಹಿಳೆಯ ರಂಪಾಟ

Prasthutha|

ಮುಂಬೈ: ವಿಮಾನದಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಬ್ಯುಸಿನೆಸ್ ಕ್ಲಾಸ್ ಸೀಟು ಬೇಕೆಂದು ಪಟ್ಟುಹಿಡಿದು ವಿದೇಶಿ ಮಹಿಳೆಯೊಬ್ಬಳು ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ ಘಟನೆ ಏರ್ ವಿಸ್ತಾರ ವಿಮಾನದರಲ್ಲಿ  ಸೋಮವಾರ ನಡೆದಿದೆ.

- Advertisement -

ಏರ್ ವಿಸ್ತಾರದ ಯುಕೆ 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಇಟಲಿಯ ಪಾವೊಲಾ ಪೆರಿಚಿಯೋ ಎಂಬ ಮಹಿಳೆ ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ್ದು, ಆಕೆಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಮಾನದಲ್ಲಿ ಪಾವೊಲಾ ಅವರು ಎಕನಾಮಿ ಕ್ಲಾಸ್ ಟಿಕೆಟ್ (ಸಾಮಾನ್ಯ ದರ್ಜೆ) ಪಡೆದಿದ್ದು ನನಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಆಗಿ ಪರಿವರ್ತಿಸಿಕೊಡಬೇಕೆಂದು ವಿಮಾನದೊಳಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ಕೋಪಗೊಂಡ ಆಕೆ ಹಲ್ಲೆ ಮಾಡಿ ಉಗುಳುತ್ತಾ ಬಟ್ಟೆಗಳನ್ನು ಕಳಚಿ ಅರೆನಗ್ನಳಾಗಿಯೇ ವಿಮಾನದೊಳಗೆ ಓಡಾಡಿ ರಂಪಾಟ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆಯನ್ನು ಸಿಬ್ಬಂದಿಯ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದರಾದರೂ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ.

Join Whatsapp