ಯೆಮನ್: ಹಮಾಸ್ ದಾಳಿಯ ನೆಪದಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ನಾಗರಿಕರನ್ನು ಬೇಟೆಯಾಡುತ್ತಿದ್ದು, ಅಂತಾರಾಷ್ಟ್ರೀಯ ಕಾನೂನನ್ನು, ವಿಶ್ವಸಂಸ್ಥೆಯ ಸಲಹೆಗಳನ್ನು ಎಲ್ಲ ಮೀರುತ್ತಿದೆ. ದಾಳಿ ಮುಂದುವರೆಸುವ ಹೇಳಿಕೆಗಳನ್ನೂ ನೀಡುತ್ತಿದೆ. ಪ್ಯಾಲೆಸ್ತಿನಿಯನ್ ನಾಗರಿಕರ ಸಾವು ನೋವಿನ ಬಗ್ಗೆ, ಮಿಲಿಯಾಂತರ ಜನರ ನಿರಾಶ್ರಿತರಾಗಿರುವುದರ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಕೆರಳಿ ಕೆಂಡಾಮಂಡಲವಾಗಿದೆ. ದಾಳಿ ನಿಲ್ಲಿಸುವ ಎಚ್ಚರಿಕೆ ಮೀರಿದ ಇಸ್ರೇಲ್ ವಿರುದ್ಧ ಇದೀಗ ಯೆಮೆನ್ ಅಧಿಕೃತವಾಗಿ ಯುದ್ಧ ಘೋಷಿಸಿದೆ.
ಯೆಮೆನ್ ಭದ್ರತಾ ಪಡೆ ಮುಖ್ಯಸ್ಥ ಯುದ್ಧ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಮಿಸೈಲ್‌ಗಳು ತೂರಿ ಬಂದಿದೆ.
ಯೆಮನ್ ಯುದ್ಧ ಘೋಷಣೆ ಕುರಿತು ಭದ್ರತಾ ಪಡೆ ವಕ್ತಾರ ಯಹ್ಯಾ ಸೆರಿ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ. ಯುದ್ಧ ಘೋಷಣೆ ಬೆನ್ನಲ್ಲೇ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಆರಂಭಗೊಂಡಿದೆ.
ಪ್ಯಾಲೆಸ್ತಿನ್ ಸಹೋದರ,ಸಹೋದರಿಯರಿಗೆ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಯೆಮೆನ್ ಹೇಳಿದೆ. ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಯೆಮೆನ್ ಶಸಸ್ತ್ರ ಪಡೆಗಳು ಭೀಕರ ದಾಳಿ ನಡೆಸಲಿದೆ ಎಂದೂ ಹೇಳಿದೆ. ಇಸ್ರೇಲ್ ಘೋರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಕೂಡ ಯೆಮೆನ್ ಎಚ್ಚರಿಸಿದೆ.