ಮುರುಗಮಲ್ಲದಿಂದ ಕಿಡ್ನಾಪ್ ಆಗಿದ್ದ ಮಗು ಹುಬ್ಬಳ್ಳಿಯಲ್ಲಿ ಪತ್ತೆ

Prasthutha|

ಚಿಂತಾಮಣಿ: ತಾಲೂಕಿನ ಮುರುಗಮಲ್ಲ ಗ್ರಾಮದ ದರ್ಗಾದಲ್ಲಿ ರವಿವಾರ ಎರಡು ವರ್ಷದ ಗಂಡು ಮಗು ಜಾವಿದ್ ಕಿಡ್ನಾಪ್ ಆಗಿ ಪೋಷಕರ ರೋದನ ಮುಗಿಳು‌ ಮುಟ್ಟಿತ್ತು. ಎರಡು ದಿನ ಕಳೆದು ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ.

- Advertisement -

ದರ್ಗಾಕ್ಕೆ ಬಂದಿದ್ದ ಬೆಂಗಳೂರಿನ ಪಾದರಾಯನಪುರದ ಝಬೀವುಲ್ಲಾ, ಅವರ ಮಾವ ದಸ್ತು, ಅತ್ತೆ ಆಯಿಷಾ ಹಾಗೂ ಸಂಬಂಧಿಕರೊಂದಿಗೆ ಮಗು ಇತ್ತು. ಇದ್ದಕ್ಕಿದ್ದಂತೆ ಮಗು ಕಾಣೆಯಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ದರ್ಗಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಮಗು ಸಿಕ್ಕಿರುವ ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ‌ಮಂಗಳವಾರ ಮಧ್ಯಾಹ್ನ ಮಗು ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹುಬ್ಬಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಮಗು ಸಿಕ್ಕಿರುವ ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ‌

- Advertisement -

ಪೊಲೀಸರ ತಂಡ ಹಾಗೂ ಮಗುವಿನ ತಂದೆ-ತಾಯಿ ಹುಬ್ಬಳ್ಳಿಗೆ ಧಾವಿಸಿದ್ದಾರೆ. ಮಗು ಪತ್ತೆಯಾಗಿರೋದು ಎಲ್ಲಿ, ಪತ್ತೆಯಾಗಿದೆ. ಮಗುವನ್ನು ಎತ್ತಿಕೊಂಡು ಹೋದ ಅಪರಿಚಿತ ಯಾರು? ಅಲ್ಲಿ ಏಕೆ ಬಿಟ್ಟು ಹೋದ ವ್ಯಕ್ತಿ ಯಾರು ಎಂಬ ಬಗ್ಗೆ ಇನ್ನೂ ಯಾವ ಮಾಹಿತಿ ಲಭ್ಯವಾಗಿಲ್ಲ. ಹುಬ್ಬಳ್ಳಿಗೆ ತೆರಳಿರುವ ಪೊಲೀಸರ ತಂಡ ಮರಳಿದ ಬಳಿಕ ಎಲ್ಲಾ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp