ಇರಾಕ್: ಔತಣಕೂಟವೊಂದರಲ್ಲಿ ಅಡುಗೆ ತಯಾರಿಸುತ್ತಿದ್ದ ವೇಳೆ ಬಾಣಲೆಗೆ ಬಿದ್ದು ಪ್ರಸಿದ್ಧ ಬಾಣಸಿಗರೊಬ್ಬರು ಬೆಂದುಹೋಗಿರುವ ಭಯಾನಕ ಘಟನೆ ಇರಾಕ್ನ ಜಾಕೋ ಪ್ರದೇಶದಲ್ಲಿ ನಡೆದಿದೆ.
ಬಾಣಲೆಗೆ ಬಿದ್ದು ಮೃತಪಟ್ಟ ಬಾಣಸಿಗನನ್ನು ಜಾಕೋ ಪ್ರದೇಶದ ಇಸ್ಸಾ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಅದ್ದೂರಿ ಮದುವೆ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಬಾಣಸಿಗರ ಬೃಹತ್ ಗುಂಪು ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು. ಆ ಸಮಯದಲ್ಲಿ ಇಸ್ಮಾಯಿಲ್ ಚಿಕನ್ ಸೂಪ್ ತಯಾರಿಸುತ್ತಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ಅವರು ಇದ್ದಕ್ಕಿದ್ದಂತೆಯೇ ಕಾಲುಜಾರಿ ಬಾಣಲೆಯಲ್ಲಿ ಬಿದ್ದುಬಿಟ್ಟಿದ್ದಾರೆ. ಬಾಣಲೆ ತೀವ್ರ ಬಿಸಿ ಇದ್ದುದರಿಂದ ಬಾಣಸಿಗ ಬೆಂದುಹೋಗಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
25 ವರ್ಷಗಳಿಂದ ಇದೇ ವೃತ್ತಿಯಲ್ಲಿ ಭಾರಿ ಖ್ಯಾತಿ ಗಳಿಸಿದ್ದ ಇಸ್ಸಾಇಸ್ಮಾಯಿಲ್ ಇದೀಗ ದುರಂತ ಅಂತ್ಯ ಕಂಡಿದ್ದಾರೆ.