87,000 ಡಾಲರಿಗೆ ಹರಾಜು ಆದ ಒಂದೂವರೆ ಶತಮಾನ ಹಿಂದಿನ ಜೋಡಿ ಜೀನ್ಸ್

Prasthutha|

ನವದೆಹಲಿ: 1880ನೇ ಇಸವಿಯ ಒಂದು ಜೋಡಿ ಲೆವಿಸ್ ಜೀನ್ಸ್ ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 87,000 ಡಾಲರಿಗೆ ಮಾರಾಟವಾಗಿದೆ. 

- Advertisement -

ಡೆನಿಮ್ ಹಳೆಯ ಬಟ್ಟೆಗಳ ಸಂಗ್ರಾಹಕರಾದ 23ರ ಪ್ರಾಯದ ಕೈಲ್ ಹಾಂಟರ್ ಮತ್ತು ಜಿಪ್ ಸ್ಟೀವನ್ಸನ್ ಈ ಜೀನ್ಸ್ ಗಳನ್ನು ಖರೀದಿಸಿದ್ದಾರೆ.

ಅವರಿಗೆ ಎರಡನ್ನೂ ಒಟ್ಟಿಗೆ ಕೊಳ್ಳುವ ಇರಾದೆ ಇರಲಿಲ್ಲ.

- Advertisement -

“ಹರಾಜು ಆರಂಭವಾಗುವವರೆಗೆ ನಮಗೆ ಎರಡನ್ನೂ ಒಟ್ಟಿಗೆ ಖರೀದಿಸುವ ಉದ್ದೇಶ ಇರಲಿಲ್ಲ. ಅವುಗಳ ಹಳೆಯ ರೂಪ ನೋಡಿ ಕರುಣೆಯೂ ಉಕ್ಕಿ ಬಂತು” ಎಂದು ಸ್ಟೀವನ್ಸನ್ ಹೇಳಿದ್ದಾರೆ.

87,000 ಡಾಲರ್ ಅಂದರೆ ಅಂದಾಜು 72 ಲಕ್ಷ ರೂಪಾಯಿ ಬೆಲೆಗೆ ಹಳೆಯ ಜೀನ್ಸ್ ಹರಾಜಾದುದು ಇದೇ ಮೊದಲು. ಅದರಲ್ಲಿ ಕೊಳ್ಳುಗರ 15 ಶೇಕಡಾ ಹೆಚ್ಚಿನ ಮೌಲ್ಯವೂ ಸೇರಿದೆ.

ಅಜ್ಟೆಕ್ ಸಣ್ಣ ಪಟ್ಟಣ ಹೊರಾವರಣದ ಡುರಾಂಗೋ ವಿಂಟೇಜ್ ಫೆಸ್ಟಿವಸ್ ನಲ್ಲಿ ಈ ಹರಾಜು ನಡೆದಿದೆ.

ಹಾಂಟರ್ 90 ಶೇಕಡಾ ಹಣ ನೀಡಿದರೆ ಲಾಸ್ ಏಂಜಲ್ಸ್ ನಲ್ಲಿ ಮೂರು ದಶಕದಿಂದ ಡೆನಿಮ್ ರಿಪೇರಿ ಅಂಗಡಿ ನಡೆಸುವ ಸ್ಟೀವನ್ಸನ್ ಉಳಿದ 10% ಹಣ ನೀಡಿದರು.

“ಇಂತಹ ಹರಿದ ಸ್ಥಿತಿಯಲ್ಲಿ, ಈ ಅಳತೆಯಲ್ಲಿ ಜೀನ್ಸ್ ಗಳು ತುಂಬ ಅಪರೂಪ” ಎಂದೂ ಸ್ಟೀವನ್ಸನ್ ಹೇಳಿದ್ದಾರೆ.

ಬಿಟ್ಟುಬಿಡಲಾದ ಗಣಿಯೊಂದರಲ್ಲಿ ಡೆನಿಮ್ ಪ್ರಾಚ್ಯ ವಸ್ತು ಸಂಶೋಧಕರೊಬ್ಬರು ಈ ಜೋಡಿ ಜೀನ್ಸ್ ಪತ್ತೆ ಮಾಡಿದ್ದಾರೆ. ಇಷ್ಟು ಹಳೆಯ ಜೀನ್ಸ್ ತೀರಾ ಅಪರೂಪ ಎಂದು ಐದು ವರ್ಷಗಳ ಹಿಂದೆ ಅದನ್ನು ಕಂಡುಹಿಡಿದಾಗ ಸ್ಟೀವನ್ಸನ್ ಹೇಳಿದ್ದರು.

ಹಳೆಯದಾದರೂ ಇನ್ನೂ ಗಟ್ಟಿಯಿದ್ದು ತೊಡಬಹುದು ಎಂದೂ ಸ್ಟೀವನ್ಸನ್ ತಿಳಿಸಿದ್ದಾರೆ.

ಸ್ಮಿತ್ ಸೋನಿಯನ್ ಇಲ್ಲವೇ ಮೆಟ್ರೋಪಾಲಿಟನ್ ಮ್ಯಾಸಿಯಮ್ಸ್ ಆರ್ಟ್ಸ್ ನಲ್ಲಿ ಅವನ್ನು ಇಡಬಹುದಾದರೂ, ವ್ಯಕ್ತಗತ ಖರೀದಿದಾರರು ಬಂದರೆ ರಿಪೇರಿ ಮಾಡಿ ಕೊಡಲು ಸ್ಟೀವನ್ಸನ್ ಸಿದ್ಧರಿದ್ದಾರೆ.



Join Whatsapp