ಮಂಗಳೂರು ರಥಬೀದಿ ಕಾಲೇಜು ಪ್ರಕರಣ: ಸಂತ್ರಸ್ತೆ ವಿರುದ್ಧವೇ ಪ್ರಕರಣ ದಾಖಲು

Prasthutha|

►ನಮಗೂ ಬೆದರಿಕೆಗೂ ಸಂಬಂಧವಿಲ್ಲ: ವಿದ್ಯಾರ್ಥಿನಿ ಹಿಬಾ ಶೇಖ್

- Advertisement -

ಮಂಗಳೂರು: ನಗರದ ರಥಬೀದಿಯ ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿದಕ್ಕೆ ಎಬಿವಿಪಿ ಕಾರ್ಯಕರ್ತ ಸಾಯಿ ಸಂದೇಶ್ ಹಾಗೂ ಆತನ ಸಹಚರರು ಸೇರಿ ಹಲ್ಲೆ ನಡೆಸಿ ಧಾರ್ಮಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ವಿರುದ್ಧವೇ ಪ್ರಕರಣ ದಾಖಲಾಗಿದೆ.

ಹಿಬಾ ಸೇರಿದಂತೆ 6 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಮ್ಮ ವಿರುದ್ಧ ಎಫ್ಐಆರ್ ದಾಖಲಾದ ವಿಚಾರದ ಬಗ್ಗೆ ಮಂಗಳೂರಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಬಾ ಶೇಖ್, ತನಗೆ ಬೆದರಿಕೆ ಹಾಕಿದ ಸಾಯಿ ಸಂದೇಶ್ ಹಾಗೂ ಇತರರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದೆ. ಆದರೆ ಅದಕ್ಕೆ ಪೂರಕವಾದ ಸೆಕ್ಷನ್ ಹಾಕಿಲ್ಲ. ಯಾಕಾಗಿ ದೌರ್ಜನ್ಯ ಸೆಕ್ಷನ್ ಹಾಕಿಲ್ಲ ಎಂದು ಕಮೀಷನರ್ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

- Advertisement -

ಸಾಯಿ ಸಂದೇಶ್ ಗೆ ಬಂದಿರುವ ಕೊಲೆ ಬೆದರಿಕೆ ಪೋಸ್ಟ್ ಗಳಿಗೂ ನಮಗೂ ಸಂಬಂಧವಿಲ್ಲ. ಅಂತಹ ಪೋಸ್ಟ್ ಗಳನ್ನು ನಾವ್ಯಾರೂ ಒಪ್ಪಿಕೊಳ್ಳಲಾರೆವು. ಇದನ್ನೇ ಮುಂದಿಟ್ಟು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಎಬಿವಿಪಿ ಕಾರ್ಯಕರ್ತೆ ಕವನಾ ಶೆಟ್ಟಿ ಎಂಬಾಕೆ ಸುಳ್ಳು ಆರೋಪ ಹೊರಿಸಿ ದೂರು ನೀಡಿದ್ದಾಳೆ. ಕವನಾ ಶೆಟ್ಟಿ ಘಟನಾ ಸ್ಥಳದಲ್ಲಿ ಇರಲೇ ಇಲ್ಲ. ನಾನು ಮತ್ತು ನನ್ನ ಸಹಪಾಠಿ ಬೆದರಿಸಿದ್ದಾಗಿ ದೂರು ನೀಡಿದ್ದಾರೆ. ಆದರೆ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸ್ ದಾಖಲಾಗಿದೆ. ಸಾಯಿ ಸಂದೇಶ್ ಮತ್ತು ಸಹಚರರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ಹಿಬಾ ಶೇಖ್ ಒತ್ತಾಯಿಸಿದರು.

ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು ಮಾತನಾಡಿ, ಮಂಗಳೂರಿನ ದಯಾನಂದ್ ಪೈ ಪದವಿ ಸರಕಾರಿ ಕಾಲೇಜಿನಲ್ಲಿ ದಿನಾಂಕ 4-03-2022 ರಂದು ಎಬಿವಿಪಿ ಕಾರ್ಯಕರ್ತರಿಂದ ಬೆದರಿಕೆಗೊಳಗಾಗಿ, ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಹಿಬಾ ಶೇಕ್ ತಪ್ಪಿತಸ್ಥರ ವಿರುದ್ಧ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಬಂದರ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸ್ವೀಕರಿಸಿ ನ್ಯಾಯಾಲಯಕ್ಕೆ ದೂರು ದಾಖಲಿಸಲು ಅನುಮತಿ ಕೊರಲಾಗಿತ್ತು, ನ್ಯಾಯಾಲಯದ ಆದೇಶದಂತೆ ದೂರು ಸಹ ದಾಖಲಾಯಿತು. ಆದರೆ, ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರ ವಿರುದ್ಧ ಎಬಿವಿಪಿ ದಯಾನಂದ ಪೈ ಕಾಲೇಜು ಘಟಕದ ಕಾರ್ಯದರ್ಶಿ ಕವನಾ ಶೆಟ್ಟಿ ನಕಲಿ ಕಥೆ ಕಟ್ಟಿ ದೂರನ್ನು ನೀಡಿದ್ದು, ಯಾವುದೇ ಆಧಾರವಿಲ್ಲದೆ ಅದೇ ದೂರನ್ನು ಪರಿಗಣಿಸಿ ಸಂತ್ರಸ್ತ ವಿದ್ಯಾರ್ಥಿನಿಯರ ವಿರುದ್ಧವೇ ದೂರು ದಾಖಲಾಗಿದ್ದು ಖಂಡನೀಯ ಎಂದು ತಿಳಿಸಿದರು. ಎಬಿವಿಪಿ ಎಂಬುದು ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾಗಿದ್ದು, ಆಡಳಿತದಲ್ಲಿ ಬಿಜೆಪಿ ಪಕ್ಷ ಇರುವುದರಿಂದ ಬಿಜೆಪಿ ಮುಸ್ಲಿಮರನ್ನು ತುಳಿಯಲು ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆ ಮಾದರಿ. ಮೊದಲನೆಯದಾಗಿ ನಮಗೆ ಅನ್ಯಾಯವಾದಾಗ ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಟ್ಟು, ಕಾನೂನಾತ್ಮಕವಾಗಿ ನ್ಯಾಯ ಪಡೆಯಲು ಹೋದರೆ, ಅನ್ಯಾಯಕ್ಕೊಳಗಾದವರ ವಿರುದ್ಧವೇ ಈ ರೀತಿ ಹಗೆ ಸಾಧಿಸಲಾಗುತ್ತಿದೆ ಎಂದರೆ ಇದರ ಅರ್ಥ, ಕಾನೂನಿನ ಮೇಲೆ ಸಂವಿಧಾನದ ಹಿಡಿತವಿಲ್ಲ, ಬದಲಾಗಿ ಸರಕಾರದ ಹಿಡಿತದಲ್ಲಿ ಕಾನೂನು ಕಾರ್ಯಾಚರಿಸುತ್ತಿದೆ. ಇದಕ್ಕೆ ತಕ್ಕ ಮಟ್ಟದ ಪ್ರತಿರೋಧದ ಅವಶ್ಯಕತೆ ಇದೆ ಎಂದು ತಿಳಿಸಿದರು. ಹಿಬಾ ಶೇಕ್ ಸೇರಿದಂತೆ 6 ವಿದ್ಯಾರ್ಥಿನಿಯರ ಮೇಲೆಯೇ ದೂರು ದಾಖಲಾಗಿದ್ದು, ತಕ್ಷಣ ಈ ನಕಲಿ ಕೇಸನ್ನು ಹಿಂಪಡೆಯಬೇಕು, ವಿದ್ಯಾರ್ಥಿನಿಯರಿಗೆ ಜೀವ ಬೆದರಿಕೆ ಇದ್ದು ಪೋಲಿಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು, ಹಿಬಾ ಶೇಖ್ ಮೇಲೆ ದಾಳಿಗೆ ಮುಂದಾದ ಎಬಿವಿಪಿ ಕಾರ್ಯಕರ್ತರನ್ನು ತಕ್ಷಣ ಬಂಧಿಸಬೇಕು, ಕಾಲೇಜುಗಳಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಇಲಾಖೆಯು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಈ ಅನ್ಯಾಯದ ವಿರುಧ್ದ ಕಾನೂನಾತ್ಮಕವಾಗಿ ಪ್ರಶ್ನಿಸಲಾಗುವುದು ಮತ್ತು ಇದರ ವಿರುದ್ಧ ಕಾನೂನು ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ಸಂತ್ರಸ್ತೆ ವಿದ್ಯಾರ್ಥಿನಿಯರ ಜೊತೆಯಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ಉಸ್ಮಾನ್ , ಜಿಲ್ಲಾ ನಾಯಕಿ ಅಶ್ಫಿ ಉಪಸ್ಥಿತರಿದ್ದ



Join Whatsapp