ಕೇವಲ 11 ನೇ ವಯಸ್ಸಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಾಲಕ!

Prasthutha: July 9, 2021

ಬೆಲ್ಜಿಯಂ: ಕೇವಲ 11ನೇ ವಯಸ್ಸಿನಲ್ಲಿ ಪದವಿ ಶಿಕ್ಷಣ ಪೂರೈಸುವ ಮೂಲಕ ಬೆಲ್ಜಿಯಂನ ಒಸ್ಟೆಂಡ್ ನ ಲೌರೆಂಟ್​​ ಸಿಮೋನ್ಸ್ ಎಂಬ ಬಾಲಕ ದೊಡ್ಡ ಸಾಧನೆಯೊಂದನ್ನು ಮಾಡಿದ್ದಾನೆ.  ​

ಕೇವಲ 11ನೇ ವಯಸ್ಸಿನಲ್ಲಿ ಲೌರೆಂಟ್​​ ಸಿಮೋನ್ಸ್ ವಿಶ್ವವಿದ್ಯಾಲಯದಲ್ಲಿ ಪದವೀಧರ ಪ್ರಮಾಣ ಪತ್ರವನ್ನ ಪಡೆಯುವ ಮೂಲಕ ಜಗತ್ತಿನ ಎರಡನೇ ಅತೀ ಪುಟ್ಟ ಪದವೀಧರ ಎಂಬ ಸಾಧನೆಯನ್ನು ಮಾಡಿದ್ದಾನೆ.

ಈ ಪುಟಾಣಿ ಬಾಲಕ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪದವಿಯನ್ನ ಪಡೆದಿದ್ದಾನೆ. ಸಾಮಾನ್ಯ ವಯಸ್ಸಿನ ವಿದ್ಯಾರ್ಥಿಗಳು 3 ವರ್ಷದ ವ್ಯಾಸಂಗದ ಬಳಿಕ ಡಿಗ್ರಿ ಪದವಿಯನ್ನು ಪಡೆದರೆ ಈ ಪುಟ್ಟ ಬಾಲಕ ಕೇವಲ 1 ವರ್ಷದಲ್ಲಿ ಈ ಪದವಿಯನ್ನ ಪಡೆದಿದ್ದು, ಶೇಕಡಾ 85ರಷ್ಟು ಅಂಕ ಸಂಪಾದಿಸಿದ್ದಾನೆ. 

ಸಿಮೋನ್ಸ್​ ಪದವಿ ಪಡೆದ ಜಗತ್ತಿನ ಎರಡನೇ ಅತೀ ಚಿಕ್ಕ ವಯಸ್ಸಿನ ವಿದ್ಯಾರ್ಥಿಯಾಗಿದ್ದಾನೆ. 1994ರಲ್ಲಿ ಮೈಕೆಲ್​ ಕೀರ್ನಿ ಎಂಬ ಹೆಸರಿನ 10 ವರ್ಷದ ಬಾಲಕ ದಕ್ಷಿಣ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ