ಮುಂಬಯಿ: ತಲೆಗೆ ಗುಂಡು ಹಾರಿಸಿಕೊಂಡು ರಾಜ್ಯದ ಬಿಜೆಪಿ ಮುಖಂಡ ಭಗೀರಥ ಬಿಯಾನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಗೀರಥ ಬಿಯಾನಿ ಅವರು ಬಿಜೆಪಿಯ ಬೀಡ್ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದರು. ಆದರೆ ಇಂದು ಮಧ್ಯಾಹ್ನ ಮೀರಾ ನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಪರವಾನಗಿ ಪಡೆದ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಶಬ್ಧ ಕೇಳಿಸಿಕೊಂಡ ಕುಟುಂಬಸ್ಥರು 50 ವರ್ಷ ವಯಸ್ಸಿನ ಭಗೀರಥ ಬಿಯಾನಿ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟೋತ್ತಿಗಾಗಲೇ ಬಿಜೆಪಿ ಮುಖಂಡ ಮೃತಪಟ್ಟಿದ್ದರು
ಭಗೀರಥ ಬಿಯಾನಿ ಅವರು ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗುತ್ತಿದ್ದು, ಇದೀಗ ಈ ಸಂಬಂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ