7.3 ಕೆ.ಜಿ ತೂಕದ ಮಗು ಜನನ

Prasthutha|

ಲ್ಯಾನ್ಕೆಸ್ಟರ್: ಬ್ರೆಜಿಲ್ ಮಹಿಳೆಯೊಬ್ಬರು 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ಮಗುವೊಂದಕ್ಕೆ ಜನ್ಮ ನೀಡಿದ್ದು ವರದಿಯಾಗಿದೆ.

- Advertisement -


ಪಾರಿಂಟಿನ್ಸ್ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್ ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿದೆ.


2016ರಲ್ಲಿ ಜನಿಸಿದ 6.8 ಕೆ.ಜಿ ತೂಕದ ಮಗು, ಬ್ರೆಜಿಲ್ನಲ್ಲಿ ಈವರೆಗೆ ಜನಿಸಿದ ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು. ಆದರೆ, ಆ್ಯಂಗರ್ ಸನ್ ಸ್ಯಾಂಟೋಸ್ ಆ ದಾಖಲೆ ಮುರಿದಿದೆ.
ಆದರೆ, ವಿಶ್ವದಲ್ಲಿ ಇದಕ್ಕಿಂತ ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ ತೂಕದ ಮಗು ಜನಿಸಿತ್ತು.

Join Whatsapp