ಕುತ್ತಿಗೆಗೆ ಉಯ್ಯಾಲೆ ಬಿಗಿದು 9ವರ್ಷದ ಬಾಲಕ ಮೃತ್ಯು

Prasthutha|

ಕಾಸರಗೋಡು: ಉಯ್ಯಾಲೆ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಟ್ಟಾರಿಕ್ಕಲ್‌ನಲ್ಲಿ ನಡೆದಿದೆ.

- Advertisement -

ಚಿಟ್ಟಾರಿಕ್ಕಲ್‌ ಕಂಬಲ್ಲೂರು ತಾಮರಸ್ಶೆರಿಯ ಸುಧೀಶ್‌ ಅವರ ಪುತ್ರ ಸೌರಂಗ್‌ (9) ಮೃತಪಟ್ಟ ಬಾಲಕ.

ಮನೆಯ ಸಮೀಪದ ರಬ್ಬರ್‌ ತೋಟದಲ್ಲಿ ಸೀರೆ ಬಳಸಿ ಉಯ್ಯಾಲೆ ಕಟ್ಟಲಾಗಿತ್ತು. ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಗಂಭೀರ ಸ್ಥಿತಿಗೆ ತಲುಪಿದ ಸೌರಂಗ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

- Advertisement -

ಚಿಟ್ಟಾರಿಕ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮೃತ ದೇಹವನ್ನು ಶವ ಮಹಜರಿಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.