ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾವು

Prasthutha|

- Advertisement -

ಗುಜರಾತ್: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಗುಜರಾತ್‌ ನ ಜಾಮ್‌ ನಗರದಲ್ಲಿ ನಡೆದಿದೆ.

ತಮಾಚನ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಬುಡಕಟ್ಟು ಕುಟುಂಬಕ್ಕೆ ಸೇರಿದ 2 ವರ್ಷದ‌ ಹೆಣ್ಣು ರೋಶನಿಯನ್ನು ಸುಮಾರು 21 ಗಂಟೆಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಯಿತದರೂ , ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ.

- Advertisement -

ಶನಿವಾರ ಬೆಳಗ್ಗೆ 9:30 ಗಂಟೆಯ ಸುಮಾರಿಗೆ ಆಟವಾಡುತ್ತಿದ್ದಾಗ ಕೃಷಿ ಜಮೀನಲ್ಲಿದ್ದ 200 ಅಡಿ ಆಳದ ತೆರೆದ ಕೊಳವೆ ಬಾವಿಗೆ ರೋಶನಿ ಬಿದ್ದಿದ್ದಳು.

Join Whatsapp