ತಂದೆ ಮತ್ತು ತಮ್ಮನನ್ನು ಹತ್ಯೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ 15 ವರ್ಷದ ಬಾಲಕಿ

Prasthutha|

ಡಹ್ರಾಡೂನ್: ತಂದೆ ಮತ್ತು 8 ವರ್ಷದ ತಮ್ಮನನ್ನು ಹತ್ಯೆ ಮಾಡಿ, ಎರಡು ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ 15 ವರ್ಷದ ಬಾಲಕಿ ಫ್ರಿಡ್ಜ್‌ನಲ್ಲಿಟ್ಟ ಆಘಾತಕಾರಿ ಘಟನೆ ಉತ್ತರಾಖಂಡ್‌ನ ಹರಿದ್ವಾರದಲ್ಲಿ‌ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.

- Advertisement -

ಮಾರ್ಚ್ 15 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಜೋಡಿ ಕೊಲೆ ನಡೆದಿದ್ದು, ಅಂದಿನಿಂದ ಬಾಲಕಿ ಪರಾರಿಯಾಗಿದ್ದಳು. ಆಕೆಯ 19 ವರ್ಷದ ಗೆಳೆಯ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

19ರ ಹರೆಯದ ಯುವಕನ ಜೊತೆಗಿನ ಸಂಬಂಧವನ್ನು ವಿರೋಧಿಸಿದ ತನ್ನ ತಂದೆಯನ್ನು ಬಾಲಕಿ ಹತ್ಯೆ ಮಾಡಿದ್ದಾರೆ. ಆಕೆಯ ತಮ್ಮ ಈ ಕೃತ್ಯವನ್ನು ಕಣ್ಣಾರೆ ಕಂಡಿದ್ದರಿಂದ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ದೋಭಾಲ್ ತಿಳಿಸಿದ್ದಾರೆ.

- Advertisement -

ಅವರು ಓಡಿಹೋಗುವ ಮೊದಲು ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಾರೆ ಮತ್ತು ಹುಡುಗಿಯ ಪ್ರಕಾರ, ಕೊಲೆಯನ್ನು ಆಕೆಯ ಗೆಳೆಯ ಪ್ಲಾನ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ದೋಭಾಲ್ ತಿಳಿಸಿದ್ದಾರೆ.



Join Whatsapp