ಹೊಸದಿಲ್ಲಿ: ವಕೀಲರ ರಕ್ಷಣೆ ಮತ್ತು ವೃತ್ತಿ ನಿರ್ವಹಣೆಗೆ ಅನುಕೂಲವಾಗುವಂತೆ ಮಾಡಲು ದೇಶದಲ್ಲಿ ಪ್ರಬಲ ಕಾನೂನು ರೂಪಿಸುವ ಕಾರ್ಯ ನಡೆದಿದ್ದು, ವಕೀಲರ ರಕ್ಷಣೆ ಮಸೂದೆ 2021 ಬಿಡುಗಡೆಗೊಳಿಸಲಾಗಿದೆ.
ಪ್ರಸ್ತಾಪಿತ ಮಸೂದೆಯಲ್ಲಿ ವಕೀಲರಿಗೆ ರಕ್ಷಣೆ, ವಕೀಲರ ವಿರುದ್ಧದ ಪ್ರಕರಣಗಳನ್ನು ಉನ್ನತ ಪೊಲೀಸ್ ಅಧಿಕಾರಿಗಳಿಂದ ತನಿಖೆ ಹಾಗೂ ನ್ಯಾಯಾಧೀಶರ ಪೂರ್ವಾನುಮತಿ ಇಲ್ಲದೆ ವಕೀಲರ ಬಂಧನಕ್ಕೆ ನಿರ್ಬಂಧವನ್ನು ಹಾಕಲಾಗಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಮಸೂದೆಯ ಕರಡನ್ನು ಬಿಡುಗಡೆ ಮಾಡಿದ್ದು, ವಕೀಲರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪ್ರತಿಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ರೂಪಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.