ಮಹಿಳಾ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: “ಯುಪಿ ಮಾಡೆಲ್ “ ಎಂದ ನೆಟ್ಟಿಗರು

Prasthutha|

ಸಹರಾನ್ಪುರ: ಉತ್ತರ ಪ್ರದೇಶ ಮಾಡೆಲ್ ಎಂದು ಕರ್ನಾಟಕದಲ್ಲಿ ಬಿಜೆಪಿಗರು ಬೊಬ್ಬಿರಿಯುತ್ತಿದ್ದಾರೆ. ಈ ನಡುವೆ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ಈ ಕುರಿತು ಉತ್ತರ ಪ್ರದೇಶ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.


ಈ ಬಗ್ಗೆ ಕಾಂಗ್ರೆಸ್ ವೀಡಿಯೋವನ್ನು ಟ್ವೀಟ್ ಮಾಡಿದ್ದು, ಯುಪಿಯ ಕಬಡ್ಡಿ ಆಡುವ ಹೆಣ್ಣುಮಕ್ಕಳಿಗೆ ಶೌಚಾಲಯದಲ್ಲಿ ಊಟ ಬಡಿಸಲಾಗಿದೆ. ಸುಳ್ಳು ಪ್ರಚಾರಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡುವ ಬಿಜೆಪಿ ಸರ್ಕಾರದ ಬಳಿ ನಮ್ಮ ಆಟಗಾರರಿಗೆ ಉತ್ತಮ ವ್ಯವಸ್ಥೆ ಮಾಡಲು ಹಣವಿಲ್ಲ ಎಂದು ಬರೆದುಕೊಂಡಿದೆ.
ಹಲವು ನೆಟ್ಟಿಗರು ಇದನ್ನು ಯುಪಿ ಮಾಡೆಲ್ ಎಂದು ಕುಟುಕಿದ್ದಾರೆ



Join Whatsapp