ಪ್ಯಾರಿಸ್: ವ್ಯಕ್ತಿಯೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನು ನಿಮಿಷಗಳಲ್ಲಿ ಹತ್ತಿದ್ದಾರೆ.
‘ಫ್ರೆಂಚ್ ಸ್ಪೈಡರ್ಮ್ಯಾನ್’ ಎಂದೇ ಕರೆಯಲಾಗುವ ಅಲೈನ್ ರಾಬರ್ಟ್ ಈ ಸಾಧನೆ ಮಾಡಿದವರು.
ಈ ಬಗ್ಗೆ ಮಾತನಾಡಿದ, ‘60ನೇ ವಯಸ್ಸು ತಲುಪಿದ ನಂತರವೂ ಸಾಧನೆ ಮಾಡುವುದು ಸಾಧ್ಯ ಎಂಬ ಸಂದೇಶವನ್ನು ಜನರಿಗೆ ರವಾನಿಸಲು ನಾನು ಈ ಕಟ್ಟಡವನ್ನು ಏರಿದೆ. ಈ ವಯಸ್ಸಿನಲ್ಲೂ ನೀವು ಸ್ಪರ್ಧಿಸಬಹುದು, ಸಕ್ರಿಯವಾಗಿರಬಹುದು. ಹಾಗೆಯೇ ಅನೇಕ ಅದ್ಭುತ ಕೆಲಸಗಳನ್ನು ಮಾಡಬಹುದು’ ಎಂದು ಹೇಳಿದರು.
ಅಲೈನ್ ರಾಬರ್ಟ್ 48 ಅಂತಸ್ತಿನ ಕಟ್ಟಡ ಏರಲು ಬಳಸಿದ ಸಮಯ 60 ನಿಮಿಷ, ಎಂದರೆ ಒಂದೇ ತಾಸನ್ನಾಗಿದೆ.