ಲಂಡನ್: ಮುಸ್ಲಿಮರು ನಮಾಝ್ ಮಾಡುತ್ತಿದ್ದ ಸಂದರ್ಭದಲ್ಲಿ ಬಲಪಂಥೀಯ ಹಿಂದುತ್ವವಾದಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ ಘಟನೆ ಯುನೈಟೆಡ್ ಕಿಂಗ್ ಡಮ್ ನ ಲೀಸೆಸ್ಟರ್ ನಗರದಲ್ಲಿ ನಡೆದಿದೆ.
ಘೋಷಣೆ ಕೂಗಿ ಕಾರಣ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಿಂಸಾತ್ಮಕ ಅವ್ಯವಸ್ಥೆಗೆ ಪಿತೂರಿ ನಡೆಸಿದ ಶಂಕೆಯ ಮೇಲೆ ಒಬ್ಬ ವ್ಯಕ್ತಿಯನ್ನು ಮತ್ತು ಹರಿತವಾದ ವಸ್ತುವನ್ನು ಹೊಂದಿರುವ ಅನುಮಾನದ ಮೇಲೆ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 28 ರಂದು ಭಾರತ, ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ನಂತರ ನಡೆದ ಸಣ್ಣ ಘರ್ಷಣೆಯ ವಾರಗಳ ನಂತರ ಈ ಘಟನೆ ವರದಿಯಾಗಿದೆ. ಈ ಬಗ್ಗೆ ಪೊಲೀಸರಿಗೆ ಪತ್ರ ಬರೆದ ಈಸ್ಟ್ ಲೀಸೆಸ್ಟರ್ ಸಂಸದೆ ಕ್ಲೌಡಿಯಾ ವೆಬ್ಬೆ, ಜನಾಂಗೀಯ ನಿಂದನೆ ಮತ್ತು ಹಿಂಸಾಚಾರಕ್ಕೆ ಕಾರಣವಾದವರನ್ನು ಬಂಧಿಸಿದ್ದಕ್ಕೆ ಪೊಲೀಸರ ಕ್ರಮಗಳನ್ನು ಶ್ಲಾಘಿಸಿದರು ಮತ್ತು ಇಸ್ಲಾಮೋಫೋಬಿಯಾದ ಪರಿಣಾಮವೇ ಹಿಂದುತ್ವವಾದಿಗಳ ಈ ವರ್ತನೆಗೆ ಕಾರಣ ಎಂದು ಹೇಳಿದರು.