ಬೆಂಗಳೂರು: ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಭಾನುವಾರ ಚಾಮರಾಜಪೇಟೆ ಕ್ಷೇತ್ರದ ನಂಜಮ್ಮ ಅಗ್ರಹಾರದ ಜಿಂಕೆ ಪಾರ್ಕ್ ಎದುರಿಗಿರುವ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಒಳಾಂಗಣ ಕ್ರಿಕೆಟ್ ಸ್ಟೇಡಿಯಂನ್ನು ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ತಾವು ಹೊಡೆದ ಬಾಲ್ ಯಾರು ಹಿಡಿಯುತ್ತಾರೋ ಅವರಿಗೆ 5,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಂತೆಯೇ, ಬಾಲ್ ಹಿಡಿದ ಚೇತನ್ ಟೆಬಾ ಎಂಬ ಯುವಕನಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು 5,000 ರೂ. ಬಹುಮಾನ ನೀಡಿದರು. ಮೇವಾಡ ಸೇವಾ ಸಂಸ್ಥೆಗೆ ಕ್ರೀಡಾ ಅಭಿವೃದ್ಧಿ ಕಾರ್ಯಗಳಿಗಾಗಿ 1 ಲಕ್ಷ ರೂ. ಅನುದಾನವನ್ನೂ ನೀಡಿದರು.