‘40% ಸಿಎಂ ಗೆ ಸುಸ್ವಾಗತ’ ಎಂದು ಬೊಮ್ಮಾಯಿಯನ್ನು ಅಣಕಿಸಿ ಬ್ಯಾನರ್ ಅಳವಡಿಸಿದ ಟಿಆರ್ಎಸ್ ಪಕ್ಷ

Prasthutha|

ಹೈದರಾಬಾದ್: ನೆರೆಯ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಪಕ್ಷವು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘40% ಸಿಎಂಗೆ ಸ್ವಾಗತ’ ಎಂಬ ಬ್ಯಾನರನ್ನು ಅಳವಡಿಸಿ ಮತ್ತೊಮ್ಮೆ ಕರ್ನಾಟಕವನ್ನು ಅಣಕಿಸಿದೆ.

- Advertisement -

ಸಿಕಂದರಾಬಾದ್ ನ ಪರೇಡ್ ಮೈದಾನದ ಬಳಿ ಹಾಕಲಾಗಿರುವ ಬೃಹತ್ ಬ್ಯಾನರ್ ನಲ್ಲಿ, ಕರ್ನಾಟಕದಲ್ಲಿ ಪ್ರತಿ ಸರ್ಕಾರಿ ಯೋಜನೆಗಳಲ್ಲಿಯೂ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಕ್ಕೆ ಸಂಬಂಧಿಸಿದಂತೆ , ಸಿ ಮತ್ತು ಎಂ ಎಂಬೀ ಎರಡು ಅಕ್ಷರಗಳನ್ನು ಹೈಲೈಟ್ ಮಾಡಿ ,40% ಕಮಿಷನ್ ಗೆ ಸ್ವಾಗತ ಎಂದು ಬರೆದ ಬ್ಯಾನರನ್ನು ಬಳಸಿ ಬೊಮ್ಮಾಯಿಯನ್ನು ವ್ಯಂಗ್ಯ ಮಾಡಿದೆ.

- Advertisement -

ತೆಲಂಗಾಣ ವಿಮೋಚನಾ ದಿನಾಚರಣೆಗೆ ಚಾಲನೆ ನೀಡಲು ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಆಗಮಿಸುವ ಮುನ್ನ, ತೆಲಂಗಾಣದ ಪೆರೇಡ್ ಮೈದಾನದಲ್ಲಿ ಟಿಆರ್ಎಸ್ ಬೃಹತ್ ಫಲಕವನ್ನು ಅಳವಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುತ್ತಿದ್ದಾರೆ.



Join Whatsapp