►ನಿಮಗೆ ಹಿಂದಿ ಗೊತ್ತಿಲ್ವೇ ಎಂದು ದೇಶಭಕ್ತಿಯ ಪಾಠ ಮಾಡುವುದನ್ನು ಬಿಟ್ಟು ಜನರೊಂದಿಗೆ ವ್ಯವಹರಿಸಿ ಎಂದ ಕೇಂದ್ರ ಹಣಕಾಸು ಸಚಿವೆ
ನವದೆಹಲಿ: ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಯನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್ ಒಕ್ಕೂಟದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾತನಾಡಿ, ಬ್ಯಾಂಕ್ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಭಾಷೆ ಗೊತ್ತಿರಬೇಕು ಎಂಬುದನ್ನು ಉಲ್ಲೇಖಿಸಬೇಕು ಎಂದು ತಿಳಿಸಿದ್ದಾರೆ.
ಸ್ಥಳೀಯ ಬ್ರಾಂಚ್ಗಳ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಮಾತನಾಡುವುದಿಲ್ಲ. ಬದಲಾಗಿ ದೇಶಭಕ್ತಿಯ ಪಾಠ ಹೇಳುತ್ತಾರೆ. ನಿಮಗೆ ಹಿಂದಿ ಗೊತ್ತಿಲ್ಲವೇ? ನೀವು ಭಾರತೀಯನಲ್ಲದಿರಬಹುದು ಎಂದು ಹೇಳುವುದರಿಂದ ಯಾವುದೇ ಉತ್ತಮ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬ್ಯಾಂಕ್ಗಳಲ್ಲಿ ಸಿಬ್ಬಂದಿ ನಡುವೆ ಗೋಡೆಗಳು ನಿರ್ಮಾಣಗೊಂಡಿವೆ. ಎಲ್ಲ ಕೆಲಸವೂ ಆನ್ಲೈನ್ನಲ್ಲೇ ನಡೆಯುತ್ತದೆ ಎಂದು ಪರಸ್ಪರ ಮಾತನಾಡುವುದು ಕಡಿಮೆಯಾಗುತ್ತಿದೆ. ಸಿಬ್ಬಂದಿಗಳು ಗ್ರಾಹಕರ ಹಿತದೃಷ್ಟಿಯಿಂದ ಮಾತನಾಡಬೇಕು ಎಂದು ಸೀತಾರಾಮನ್ ಇದೇ ವೇಳೆ ತಿಳಿಸಿದ್ದಾರೆ.