ಆಸ್ಪತ್ರೆ ಹಾಸಿಗೆಯ ಮೇಲೆ ನಾಯಿಯ ವಿಡಿಯೋ ವೈರಲ್: ‘ಆತಂಕಕಾರಿ ಆರೋಗ್ಯ ವ್ಯವಸ್ಥೆ’ ಎಂದ ಕಾಂಗ್ರೆಸ್

Prasthutha|

ಭೋಪಾಲ್ : ಮಧ್ಯಪ್ರದೇಶದ ರತ್ಲಾಂನ ಆಸ್ಪತ್ರೆ ಹಾಸಿಗೆಯ ಮೇಲೆ ನಾಯಿಯೊಂದು ಮಲಗಿರುವ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್, ಇದು ರಾಜ್ಯದಲ್ಲಿನ ಆತಂಕಕಾರಿ ಆರೋಗ್ಯ ವ್ಯವಸ್ಥೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

- Advertisement -

ರತ್ಲಾಮ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರಭಾಕರ್ ನನವಾರೆ ಅವರು ರಜೆಯಲ್ಲಿದ್ದ ಕಾರಣ ಘಟನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ನಾಯಿಗಳು ಉತ್ತಮ ನಿದ್ರೆ ಮಾಡುತ್ತಿವೆ, ಆದರೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

- Advertisement -

ಈ ವಿಡಿಯೋ ಇಲ್ಲಿನ ಅಲೋಟ್ನ ಸರ್ಕಾರಿ ಆಸ್ಪತ್ರೆಯಿಂದ ಚಿತ್ರೀಕರಿಸಲಾಗಿದ್ದು, ಇದು ಬಿಜೆಪಿಯ ಆತಂಕಕಾರಿ ಆರೋಗ್ಯ ವ್ಯವಸ್ಥೆ  ಎಂದು ಕಾಂಗ್ರೆಸ್ ಮುಖಂಡ ನರೇಂದ್ರ ಸಲೂಜಾ ಟ್ವೀಟ್ ಮಾಡಿದ್ದಾರೆ.



Join Whatsapp