ಶಾಜಿಯಾ ಇಲ್ಮಿ ಹೇಳಿಕೆಗೆ ವಿಹಿಂಪ ಕಿಡಿ

Prasthutha|

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ವಕ್ತಾರೆ, ಮಾಜಿ ಟೀವಿ ಪತ್ರಕರ್ತೆ ಶಾಜಿಯಾ ಇಲ್ಮಿ ಅವರು ನರೇಂದ್ರ ಮೋದಿಯವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ನೀಡಿದ ಹೇಳಿಕೆ ವಿವಾದವಾಗಿದೆ.

- Advertisement -

 ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಮತ್ತು ಅವರಿಗೆ ನೀಡಿದ ಸ್ವಾಗತದ ಬಗ್ಗೆ ಮಾತನಾಡುತ್ತಾ ಶಾಜಿಯಾ ಇಲ್ಮಿ ಅವರು “ಗುಜರಾತಿನಿಂದ ಆರಂಭಿಸಿ ಮೋದಿಯವರ ಏಳಿಗೆಯು ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ನಡುವಣ ಸಂಬಂಧ ಹಳಸುವಂತೆ ಮಾಡಿದೆ ಎಂದಿದ್ದರು.

“ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಸಂಘ ಪರಿವಾರದ ಎರಡು ಅಂಗ ಸಂಸ್ಥೆಗಳ ನಡುವೆ ಬಿರುಕು ಹೆಚ್ಚಾಗುತ್ತಾ ಹೋಯಿತು. ಅದನ್ನು ಹೇಳಿದ್ದೇನೆಯೇ ಹೊರತು, ಗುಜರಾತ್ ಅತ್ಯಾಚಾರಿಗಳ ಬಿಡುಗಡೆಯನ್ನು ವಿಹಿಂಪ ಸ್ವಾಗತಿಸಿ ಆನಂದಿಸಿತು ಎಂಬ ಈಗನ ವಿದ್ಯಮಾನವನ್ನಲ್ಲ.” ಎಂದು ಇಲ್ಮಿ ವಿಹಿಂಪ ಬಳಿ ಕ್ಷಮೆ ಕೇಳಿದ್ದಾರೆ.

- Advertisement -

“ವಿಹಿಂಪದವವರು ಅತ್ಯಾಚಾರಿಗಳನ್ನು ಸ್ವಾಗತಿಸಿದವರು”  ಎಂದು ಇಲ್ಮಿ ಹೇಳಿರುವುದಾಗಿ ವಿಹಿಂಪ ಆರೋಪಿಸಿ, ಅವರ ಹೇಳಿಕೆಯನ್ನು ಖಂಡಿಸಿತ್ತು.

ಇದೇ ವೇಳೆ ವಿಹಿಂಪದವರು ‘ಇಲ್ಮಿಯವರ ಹೇಳಿಕೆ ಸ್ವಂತದ್ದೇ, ಪಕ್ಷದ್ದೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿಯನ್ನು ಒತ್ತಾಯಿಸಿದ್ದಾರೆ. 

ಶಾಜಿಯಾ ಇಲ್ಮಿಯವರ ಮಾತಿನಂತೆ ಎರಡೂ ಬಣದ ಉದ್ವಿಗ್ನತೆಗೆ ಮೋದಿ ಕಾರಣರೇ ಎಂದು ವಿಹಿಂಪದ ಪ್ರವೀಣ್ ತೊಗಾಡಿಯಾ ಪ್ರಶ್ನಿಸಿದ್ದಾರೆ.



Join Whatsapp