ತುರ್ಕಿಯ ಹಸ್ಮಿಗ್ರೂಪ್ ನಿಂದ ನೂತನ ಬಂಡವಾಳ ಹೂಡಿಕೆ ಯೋಜನೆ ಜಾರಿ

Prasthutha|

ಬೆಂಗಳೂರು: ತುರ್ಕಿ ಮೂಲದ ಹಸ್ಮಿ ಗ್ರೂಪ್ “ಎವೆನ್ತಾಜ್ ” ಎಂಬ ಸಹ ಬಂಡವಾಳ ಹೂಡಿಕೆ ಯೋಜನೆಯನ್ನು ಬಿಡುಗಡೆಗೊಳಿಸಿದ್ದು, ತುರ್ಕಿ ದೇಶದಲ್ಲಿ ಯಾವುದೇ ವ್ಯವಹಾರಕ್ಕೂ ಬಂಡವಾಳ ಹೂಡಿಕೆ ಮಾಡುವ ಮೂಲಕ ಲಾಭ ಪಡೆಯುವ ಯೋಜನೆ ಇದಾಗಿದೆ.

- Advertisement -

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಸ್ಮಿ ಗ್ರೂಪ್ ನ ಮುಖ್ಯ ಕಾರ್ಯನಿರ್ವಾಹಕ ತಾಜ್ಮುಲಾ ಹುಸೇನ್, ಹಸ್ಮಿ ಗ್ರೂಪ್ ಟರ್ಕಿ ಮೂಲದಾಗಿದ್ದು, ಎವೆನ್ತಾಜ್ ಹೂಡಿಕೆ ವೇದಿಕೆಯಲ್ಲಿ ತೊಡಗಿಸಿಕೊಳ್ಳುವದರಿಂದ ಟರ್ಕಿ ದೇಶದ ಶಾಶ್ವತ ನಾಗರಿಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಟರ್ಕಿ ದೇಶ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶವಾಗಿದೆ. ಇಲ್ಲಿ ಹೂಡಿಕೆ ಮಾಡುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಹಸ್ಮಿ ಗ್ರೂಪ್ ನಿಂದ ತುರ್ಕಿಸ್ ರೆಸಿಡೆನ್ಸಿ ಮತ್ತು ನಾಗರಿಕ ಹೂಡಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೂಡಿಕೆದಾರರು ಸರಿಯಾದ ಉದ್ಯಮದಲ್ಲಿ ಹೂಡಿಕೆ ಮಾಡಿ ಮಾಡಿ ಲಾಭ ಗಳಿಸುವ ದಾರಿಯನ್ನು ತೋರಿಸಲಾಗುತ್ತದೆ. ಈ ಗ್ರೂಪ್ ನಲ್ಲಿ ಅನುಭವಿ ಹಾಗೂ ಪರಿಣಿತರ ತಂಡವಿದ್ದು, ಶೇ 100ರಷ್ಟು ಪಾರದರ್ಶಕ ಕಾಗದ ಪತ್ರಗಳನ್ನು ಒದಗಿಸಿ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲಾಗುವುದು, ಹೂಡಿಕೆದಾರರು ನಮ್ಮ ಅಧಿಕೃತ ವೇದಿಕೆಗಳ ಮೂಲಕ ಸಂವಾದ ನಡೆಸಿ ತಮ್ಮ ಉದ್ಯಮ ಹೂಡಿಕೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.

- Advertisement -

ಹಸ್ಮಿ ಗ್ರೂಪ್ ನ ಸದಸ್ಯರು ಹೂಡಿಕೆ ಉದ್ದೇಶದಿಂದ ಸಭೆ ನಡೆಸಲು ಬೆಂಗಳೂರಿಗೆ ಆಗಮಿಸಿದ್ದು ಇಂದಿನಿಂದ 17ರವರೆಗೆ ಹೂಡಿಕೆದಾರರೊಂದಿಗೆ ಸಭೆ ನಡೆಸಲಿದ್ದು, ಹಸ್ಮಿ ಗ್ರೂಪ್ ನ ತಾಜ್ಮಿಲ್ ಹುಸೇನ್ ಅವರನ್ನು ಭೇಟಿಯಾಗುವವರು ಈ ಕೆಳಕಂಡ ಮೊಬೈಲ್ ಗೆ ಕರೆ ಮಾಡಬಹುದಾಗಿದೆ 917207239058



Join Whatsapp