ಟಿ20 ವಿಶ್ವಕಪ್| ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ‘ಸೋಲ್ಡ್ ಔಟ್’ !

Prasthutha|

ದುಬೈ: ಚುಟುಕು ಕ್ರಿಕೆಟ್‌ನ ಮಹಾ ಸಂಗಮ ಐಸಿಸಿ ಟಿ20 ವಿಶ್ವಕಪ್-2022, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.

- Advertisement -

ಅಕ್ಟೋಬರ್ 16ರಿಂದ ಗುಂಪು ಹಂತದ ಪಂದ್ಯಗಳಿಗೆ ಚಾಲನೆ ದೊರೆಯಲಿದೆ. ಫೈನಲ್ ಸೇರಿದಂತೆ ಒಟ್ಟು 45 ಪಂದ್ಯಗಳು ನಡೆಯಲಿದ್ದು, ಪ್ರಮುಖ ತಂಡಗಳನ್ನೊಳಗೊಂಡ ಸೂಪರ್ 12 ಹಂತ ಅಕ್ಟೋಬರ್ 22ರಿಂದ ಪ್ರಾರಂಭವಾಗಲಿದೆ.

ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

- Advertisement -

ಎಂಸಿಜಿಯಲ್ಲಿ ನಡೆಯಲಿರುವ ಈ ಹೈ ವೋಲ್ಟೇಜ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಟಿಕೆಟ್‌ಗಳು ಮಾರಾಟವಾಗಿರುವ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಷ್ಠಿತ ಟೂರ್ನಿ ಆರಂಭವಾಗಲು ಇನ್ನೂ ಒಂದು ತಿಂಗಳ ಬಾಕಿಯಿದ್ದು, ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಒಟ್ಟು 82 ದೇಶಗಳ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ

• ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ

ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ ಎ ಗ್ರೂಪ್‌ನ ರನ್ನರ್ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ

ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ

ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್

ನವೆಂಬರ್-6: ಭಾರತ vs ಅರ್ಹತಾ ಸುತ್ತಿನ ಬಿ ಗ್ರೂಪ್‌ನ ವಿಜೇತ ತಂಡ

ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ

ರೋಹಿತ್‌ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ಆರ್ ಅಶ್ವಿನ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್. ಹರ್ಷಲ್ ಪಟೇಲ್.

ಮೀಸಲು ಆಟಗಾರರು; ಮುಹಮ್ಮದ್ ಶಮಿ, ರವಿ ಬಿಷ್ಣೋಯ್, ಶ್ರೇಯಸ್ ಅಯ್ಯರ್, ದೀಪಕ್ ಚಹರ್



Join Whatsapp