ಕೆನಡಾ | ಖಲಿಸ್ತಾನ ಪರ ಸಿಖ್ಖರಿಂದ ಟೊರೊಂಟೋ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

Prasthutha|

ಟೊರೊಂಟೊ: ಟೊರೊಂಟೊದ ಅತ್ಯಂತ ಪ್ರಮುಖ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು ಖಲಿಸ್ತಾನ ಪರ ಸಿಖ್ಖರು ಧ್ವಂಸಗೊಳಿಸಿದ್ದಾರೆ.

- Advertisement -

ಸೆಪ್ಟೆಂಬರ್ 18 ರಂದು ಸಿಖ್ಖ್ ಫಾರ್ ಜಸ್ಟೀಸ್ (SFJ) ಸಂಘಟನೆ ನಿಷೇಧಕ್ಕೊಳಗಾಗಿದ್ದು, ಇದರ ವಾರ್ಷಿಕೋತ್ಸವ ಸಮೀಪಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಖಲಿಸ್ತಾನ ಜನಾಭಿಪ್ರಾಯ ಸಂಗ್ರಹಣೆ ಹತ್ತಿರದಲ್ಲಿರುವಾಗಲೇ ಟೊರೊಂಟೋದಲ್ಲಿ ಈ ಘಟನೆ ನಡೆದಿದೆ.

ಇದೀಗ ದುಷ್ಕರ್ಮಿಗಳ ತಂಡವೊಂದು ಬರೆದಿರುವ ವಿವಾದಿತ ಬರಹಗಳಾದ ‘ಖಲಿಸ್ತಾನ ಝಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್’ ಎಂದು ಪತ್ತೆಯಾಗಿದೆ.

- Advertisement -

ಕೆನಡಾದಲ್ಲಿ ಭಾರತೀಯ ಸಮುದಾಯ ಅತೀ ಹೆಚ್ಚು ವಾಸ್ತವವಿರುವ ಟೊರೊಂಟೊ ಉಪನಗರಗಳ ಬ್ರಾಂಪ್ಟನ್ ಎಂಬಲ್ಲಿ ಈ ಪೋಸ್ಟರ್ ಕಂಡು ಬಂದಿದ್ದು, ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಜನರು ತಮಗೆ ಮತ ನೀಡುವಂತೆ ಕರೆ ನೀಡಿದ್ದಾರೆ. ಆದರೆ ಸ್ಥಳೀಯ ಸಿಖ್ ಸಮುದಾಯವು ಜನಾಭಿಪ್ರಾಯ ಸಂಗ್ರಹಣೆಗೆ ಬೆಂಬಲ ಸೂಚಿಸಿಲ್ಲ.

BAPS ದೇವಸ್ಥಾನವನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್, ಕೆನಡಾ ಸರ್ಕಾರವನ್ನು ಒತ್ತಾಯಿಸಿದೆ.



Join Whatsapp