ಜಾರ್ಖಂಡ್ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ: SC, ST, ಒಬಿಸಿ ಸಮುದಾಯಗಳಿಗೆ 77% ಕೋಟಾಕ್ಕೆ ಒಪ್ಪಿಗೆ

Prasthutha|

ರಾಂಚಿ: ಜಾರ್ಖಂಡ್’ನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ SC, ST, ಒಬಿಸಿ, ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 77 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಬಿಸಿ ಮೀಸಲಾತಿಯನ್ನು ಶೇಕಡಾ 14 ರಿಂದ 27ಕ್ಕೆ ಹೆಚ್ಚಿಸಲಾಗಿದೆ.

ಹೇಮಂತ್ ಸೊರೇನ್ ನೇತೃತ್ವದ ಯುಪಿಎ ಸರ್ಕಾರ ಸ್ಥಳೀಯ ನಿವಾಸಿಗಳನ್ನು ಪರಿಗಣಿಸಲು 1932ರ ಭೂ ದಾಖಲೆಗಳನ್ನು ಬಳಸುವ ಪ್ರಸ್ತಾವನೆಗೆ ತನ್ನ ಒಪ್ಪಿಗೆ ಸೂಚಿಸಿದೆ.

- Advertisement -

ಪ್ರಸಕ್ತ ಜಾರ್ಖಂಡ್’ನಲ್ಲಿ ಎಸ್.ಟಿ ಗಳಿಗೆ ಶೇಕಡಾ 26 ರಷ್ಟು ಮೀಸಲಾತಿ ಇದ್ದರೆ, ಎಸ್.ಸಿ.ಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ಇದೆ. ಅಲ್ಲದೆ, ಒಬಿಸಿಗಳು ಶೇಕಡಾ 14 ರಷ್ಟು ಮೀಸಲಾತಿ ಹೊಂದಿದ್ದಾರೆ.

ಈ ಮಧ್ಯೆ ಎಸ್.ಸಿ., ಎಸ್.ಟಿ. ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಸಮಿತಿ ರಚನೆಗೆ ಮುಖ್ಯಮಂತ್ರಿ ಸೊರೆನ್ ಅನುಮೋದನೆ ನೀಡಿದ್ದರು. ಮೀಸಲಾತಿಯ ಮಿತಿಯನ್ನು ಹೆಚ್ಚಿಸುವುದು ಅದರಲ್ಲೂ ವಿಶೇಷವಾಗಿ ರಾಜ್ಯದ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು ಎಲ್ಲಾ ಪ್ರಮುಖ ಪಕ್ಷಗಳ ಬಹುಕಾಲದ ಬೇಡಿಕೆಯಾಗಿದೆ.



Join Whatsapp