ಆಟೋ ರಿಕ್ಷಾದಲ್ಲಿ ಸಿಕ್ಕಿದ ಚಿನ್ನವನ್ನು ಹಿಂದಿರುಗಿಸಿದ ಚಾಲಕ

Prasthutha|

ಮಂಗಳೂರು: ಆಟೋದಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಹಿಂದಿರುಗಿಸುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

- Advertisement -

ಬುಧವಾರ ರಾತ್ರಿ ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಝೈಬುನ್ನಿಸ ಎಂಬವರು ಆಟೋ ರಿಕ್ಷಾ ದಲ್ಲಿ ಬ್ಯಾಗ್ ಅನ್ನು ಮರೆತು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ರವಿ ಗಟ್ಟಿ ಬಂದರು ಠಾಣಾ ಪೊಲೀಸರ ಸಹಯೋಗದೊಂದಿಗೆ ಬ್ಯಾಗ್ ಅನ್ನು ಮಾಲಕರಿಗೆ ಹಸ್ತಾಂತರಿಸಿದ್ದಾರೆ.

ಬ್ಯಾಗ್ ನಲ್ಲಿ ಸುಮಾರು 90,000 ರೂ, ಮೌಲ್ಯದ ಚಿನ್ನಾಭರಣ ಹಾಗೂ 15,000 ನಗದು ಹಾಗೂ ಇತರ ದಾಖಲಾತಿಗಳು ಇದ್ದವು. ರವಿ ಅವರ ಪ್ರಾಮಾಣಿಕತೆಯ ಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



Join Whatsapp