ವ್ಯಕ್ತಿಯೊಬ್ಬ ತನ್ನ ಕಾರನ್ನು ರಿಪೇರಿ ಮಾಡಲು ಬಾನೆಟ್ ಓಪನ್ ಮಾಡಿದ್ದಾರೆ. ಈ ವೇಳೆ ಕಾರು ತನ್ನಷ್ಟಕ್ಕೆ ಮುಂದಕ್ಕೆ ಚಲಿಸಿ ಆ ವ್ಯಕ್ತಿ ನಜ್ಜುಗುಜ್ಜಾದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕಾರ್ ಅನ್ನು ಚಾಲು ಮಾಡಿಟ್ಟು ಬಾನೆಟ್ ಓಪನ್ ಮಾಡಿದ್ದಾರೆ. ಕೆಲ ಕ್ಷಣಗಳಲ್ಲಿಯೇ ಕಾರ್ ಮುಂದಕ್ಕೆ ಚಲಿಸಿ ಹಿಂದಿದ್ದ ಶಟರ್ ಗೆ ಢಿಕ್ಕಿ ಹೊಡೆದಿದೆ, ಶಟರ್ ಮತ್ತು ಕಾರಿನ ಮಧ್ಯೆ ಆತ ನುಜ್ಜುಗುಜ್ಜಾಗಿ ಹೋಗಿದ್ದಾರೆ. ಈ ವೀಡಿಯೋ ನೋಡಿದ ಎಲ್ಲರಲ್ಲೂ ಭೀತಿ ಹುಟ್ಟಿಸಿದೆ. ಈ ವ್ಯಕ್ತಿ ಮೆಕ್ಯಾನಿಕ್ ಹೌದೋ ಅಲ್ಲವೋ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಈ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಕಾರು ಗೇರ್ ನಲ್ಲಿ ಇಟ್ಟಿದ್ದೆ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.