ಅಲಯನ್ಸ್ ವಿವಿಯ ಆಸ್ತಿ ಮಾರಾಟ ಯತ್ನ; ಖ್ಯಾತ ಗೈನಕಾಲಜಿಸ್ಟ್ ಸ್ವರ್ಣಲತಾ ವಿರುದ್ಧ ಎಫ್ಐಆರ್

Prasthutha|

ಬೆಂಗಳೂರು: ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ಯೂನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್ ವುಡ್ ಸ್ಟಾರ್ ನಟಿ ಶ್ರೀಲೀಲಾ ಅವರ ತಾಯಿ ಖ್ಯಾತ ಗೈನಕಾಲಜಿಸ್ಟ್  ಸ್ವರ್ಣಲತಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

- Advertisement -

ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡಲು ಹೋದ ಸ್ವರ್ಣಲತಾ ಅವರು ಇದೀಗ ಪೊಲೀಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಯೂನಿವರ್ಸಿಟಿಯಿಂದ ಹೊರಹಾಕಲ್ಪಟ್ಟ  ಮಧುಕರ್ ಅಂಗೂರ್ ರಿಂದ  ಯುನಿವರ್ಸಿಟಿ ಮಾರಾಟಕ್ಕೆ ಡೀಲ್ ಕುದುರಿಸಿದ್ದ ಸ್ವರ್ಣಲತಾ ಕೆಲ ಗೂಂಡಾಗಳನ್ನು ಕರೆದುಕೊಂಡು ಯೂನಿವರ್ಸಿಟಿ ಒಳಗೆ ನುಗ್ಗಿ ಗಲಾಟೆ ಮಾಡಿರುವ ಆರೋಪ ಕೇಳಿಬಂದಿದೆ.

ಸೆ.10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಎಂಟ್ರಿಯಾದ ಮಧುಕರ್ ಹಾಗೂ ಸ್ವರ್ಣಲತಾ ಗುಂಪು ಬಂದೂಕು ಹಿಡಿದುಕೊಂಡು ಬಂದು ಯೂನಿವರ್ಸಿಟಿಯ ಒಳಗೆ ಇದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದು,ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ. ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

- Advertisement -

ಇತ್ತ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದು, ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತನ್ನ ತಾಯಿಯ ಅವಾಂತರದಿಂದಾಗಿ ಈಗತಾನೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಅವರಿಗೆ ಮುಜುಗರ ಉಂಟಾಗಿದೆ.



Join Whatsapp