ಕಾಂಗ್ರೆಸ್ ನಾಯಕನ ಆಮಂತ್ರಣದ ಮೇರೆಗೆ ಛತ್ತೀಸ್‌ಘಡದ ದೇವಸ್ಥಾನಕ್ಕೆ ಭೇಟಿ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Prasthutha|

ನವದೆಹಲಿ: ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಚಂದ್‌ಖುರಿಯ ದೇವಸ್ಥಾನವೊಂದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದು, ಇದು ಕಾಂಗ್ರೆಸ್ ಮುಖಂಡರ ಆಮಂತ್ರಣದ ಮೇರೆಗೆ ನೀಡಿದ ಭೇಟಿ ಎನ್ನಲಾಗುತ್ತಿದೆ.

- Advertisement -

ಇಲ್ಲಿನ ಮಾತಾ ಕೌಶಲ್ಯ ದೇವಸ್ಥಾನಕ್ಕೆ ಮೋಹನ್ ಭಾಗವತ್ ಮತ್ತು ಇತರ ಕೆಲ ಆರೆಸ್ಸೆಸ್ ಮುಖಂಡರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದು, ಭೂಪೇಶ್ ಬಘೇಲ್ ನೇತೃತ್ವದ ಛತ್ತೀಸ್‌ಗಢ ಸರ್ಕಾರವು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಲು ರಾಯ್‌ಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರಿಗೆ ಆಹ್ವಾನ ನೀಡಿದ್ದರು ಎಂದು ತಿಳಿದುಬಂದಿದೆ.

ಆದರೆ ಮೋಹನ್ ಭಾಗವತ್ ಅವರ ದೇವಸ್ಥಾನದ ಭೇಟಿಗೂ ಆಡಳಿತ ಪಕ್ಷದ ಆಹ್ವಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೆಸ್ಸೆಸ್ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

- Advertisement -

“ನಾವು ಮೋಹನ್ ಭಾಗವತ್ ಜಿ ಅವರನ್ನು ಮಾತಾ ಕೌಶಲ್ಯ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದೆವು. ಅಲ್ಲಿಗೆ ಭೇಟಿ ನೀಡಿದ ಮೇಲೆ ಅವರು ಶಾಂತಿಯ ಭಾವವನ್ನು ಅನುಭವಿಸಿರಬೇಕು ಎಂದು ನನಗೆ ಖಾತ್ರಿಯಿದೆ. ಅವರು ದೇವಾಲಯದ ಹೊಸ ನೋಟ, ಮಾ ಕೌಶಲ್ಯೆಯ ಮಾತೃತ್ವ ಮತ್ತು ಭಂಚ ರಾಮ್‌ನ ಶಕ್ತಿಯನ್ನು ಅರಿತುಕೊಂಡಿರಬೇಕು “ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.



Join Whatsapp