ಮಲಪ್ಪುರಂನಲ್ಲಿ 600ರಷ್ಟು ಸಮಾಧಿಗಳನ್ನು ಮರುದಫನ ಮಾಡಿದ ಮಸೀದಿ ಆಡಳಿತ ಮಂಡಳಿ

Prasthutha|

ಮಲಪ್ಪುರಂ: ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ನೂರಾರು ಸಮಾಧಿಗಳನ್ನು ತೆರೆದು ಮೃತದೇಹವನ್ನು ಬೇರೆಡೆ ಮರುದಫನ ಮಾಡಿದ ಘಟನೆ ಮಲಪ್ಪುರಂ ಜಿಲ್ಲೆಯ ವೇಣಿಯೂರ್‌ನ ಮಹಲ್ಲ್ ಜುಮಾ ಮಸೀದಿಯಲ್ಲಿ ನಡೆದಿದೆ.

- Advertisement -

ಮಸೀದಿಯ ದಫನ ಭೂಮಿಯಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದ್ದು, ಈ ನಿಟ್ಟಿನಲ್ಲಿ ಮಸೀದಿಗೆ ಸಂಬಂಧಪಟ್ಟ ಸುಮಾರು ಅರ್ಧ ಎಕರೆ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟು ಕೊಡಲಾಗಿತ್ತು.

ಆದರೆ ಸುಮಾರು 15 ವರ್ಷದಿಂದ 100ವರ್ಷಗಳು ಹಳೆಯದಾದ ಖಬರ್‌ಸ್ತಾನಗಳು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಲ್ಲಿ ಇದ್ದು, ಇದನ್ನು ತೆರೆದು ಮರುದಫನ ಮಾಡಲು ಮಸೀದಿಯ ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಸುಮಾರು 600ರಷ್ಟು ಸಮಾಧಿಗಳನ್ನು ತೆರೆದು ಮೃತದೇಹವನ್ನು ಬೇರೆಡೆ ದಫನ ಮಾಡಲಾಯಿತು. ಮಸೀದಿಯ ಹಿಂಭಾಗದಲ್ಲಿ ಕೋವಿಡ್ ಸಂದರ್ಭದಲ್ಲಿ ದಫನ ಮಾಡಲೆಂದು ಮೀಸಲಿರಿಸಿದ್ದ ಸ್ಥಳದಲ್ಲಾಗಿತ್ತು ಮರುದಫನ.

- Advertisement -

1800ರಷ್ಟು ಮನೆಗಳಿರುವ ಬೃಹತ್ ಮಹಲ್ಲ್ ಸಮಿತಿ‌ ಇದಾಗಿದ್ದು, ಇಲ್ಲಿನ ದಫನ‌ ಭೂಮಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅಲ್ಲದೇ ಇಲ್ಲಿ ಹಲವಾರು ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದವರ ಸಮಾಧಿಗಳು ಇದೆ ಎಂದು ಮಹಲ್ಲ್ ಸಮಿತಿಯವರು ತಿಳಿಸಿದ್ದಾರೆ.



Join Whatsapp