ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಹೆಸರಿನಲ್ಲಿ ನಕಲಿ‌ ವಾಟ್ಸಪ್ ಖಾತೆ: ಮೋಸ ಹೋಗದಂತೆ ಮನವಿ

Prasthutha|

- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ‌.ವಿ. ಅವರ ಫೋಟೋ ಬಳಸಿ ಹ್ಯಾಕರ್‌ಗಳು ವಾಟ್ಸಪ್ ಖಾತೆ ತೆರೆದಿದ್ದು, ಈ ಖಾತೆಯ ಮೂಲಕ ಆರ್ಥಿಕ ದುರುಪಯೋಗ ಮಾಡಲಾಗುತ್ತಿದೆಯೆಂದು ತಿಳಿದು ಬಂದಿದೆ.
8590710748 ಮೊಬೈಲ್ ನಂಬರ್‌ನಿಂದ ಜಿಲ್ಲಾಧಿಕಾರಿ ಪೋಟೋ ಬಳಸಿ ಖಾತೆ ತೆರೆಯಲಾಗಿದ್ದು, ಈ ನಂಬರ್‌ನಿಂದ ಸಹಾಯ ಅಥವಾ ಹಣ ವರ್ಗಾವಣೆ ಮಾಡಲು ಕೇಳಿಕೊಂಡಲ್ಲಿ ಪ್ರತಿಕ್ರಯಿಸದಿರುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಜನರಲ್ಲಿ ವಿನಂತಿಸಿದ್ದಾರೆ.


8590710748 ಈ ನಂಬರ್ ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿಯವರು ಕೋರಿದ್ದಾರೆ.



Join Whatsapp