ಜೈಲಿನಲ್ಲಿ ಸೊಳ್ಳೆ ಪರದೆ ಒದಗಿಸುವಂತೆ ಕೋರಿ ಮತ್ತೆ ನ್ಯಾಯಾಲಯದ ಮೊರೆ ಹೋದ ಗೌತಮ್ ನವ್ಲಾಖಾ

Prasthutha|

ನವದೆಹಲಿ: ತಲೋಕಾ ಸೆಂಟ್ರಲ್ ಜೈಲಿನಲ್ಲಿ ತನಗೆ ಸೊಳ್ಳೆ ಪರದೆಯನ್ನು ಒದಗಿಸುವಂತೆ ಕೋರಿ ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖಾ ಅವರು ಮತ್ತೆ NIA ನ್ಯಾಯಾಲಯವನ್ನು ಸಂಪರ್ಕಿಸಿರುವ ಘಟನೆ ನಡೆದಿದೆ.

- Advertisement -

ಎಲ್ಗರ್ ಷರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಕಾಯ್ದೆ ಅಡಿಯಲ್ಲಿ ನವ್ಲಾಖಾ ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣದ ಇನ್ನೊಬ್ಬ ಆರೋಪಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ವೆರ್ನಾಲ್ ಗೊನ್ಸಾಲ್ವಿಸ್ ಜೈಲಿನಲ್ಲಿ ಡೆಂಗ್ಯೂಗೆ ತುತ್ತಾರ ಕೆಲವು ದಿನಗಳ ಬಳಿಕ ನವ್ಲಾಖಾ ಅವರು ನ್ಯಾಯಾಲಯಕ್ಕೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಗೊನ್ಸಾಲ್ವಿಸ್ ಅವರು ಈಗ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಕಳೆದ ಕೆಲವು ತಿಂಗಳುಗಳಿಂದ ವಿಚಾರಣಾಧೀನ ಕೈದಿಗಳು ಮತ್ತು ಜೈಲು ಅಧಿಕಾರಿಗಳು ಜೈಲಿನಲ್ಲಿ ಸೊಳ್ಳೆ ಪರದೆಗಳ ಕೊರತೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೊಳ್ಳೆಗಳ ಬಲೆಗಳನ್ನು ಕಟ್ಟಲು ಬಳಸುವ ದಾರಗಳು ಮತ್ತು ಮೊಳೆಗಳು ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಎಂಬ ನೆಪದಲ್ಲಿ ನಾಲ್ಕು ತಿಂಗಳ ಹಿಂದೆ ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.



Join Whatsapp