ರೈಲಿನಲ್ಲಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ

Prasthutha|

ವಿಶಾಖಪಟ್ಟಣಂ: ರೈಲಿನಲ್ಲಿ  ಪ್ರಯಾಣಿಸುತಿದ್ದ  ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು  ಹೆರಿಗೆ ಮಾಡಿಸಿರುವ ಘಟನೆ ಸಿಕಂದರಾಬಾದ್ ಡುರೊಂಟೊ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

- Advertisement -

ಶ್ರೀಕಾಕುಳಂ ಮೂಲದ 28 ವರ್ಷದ ಗರ್ಭಿಣಿ ಮಹಿಳೆ ಪ್ರಯಾಣ ಮಾಡುವಾಗ ಪ್ರಸವ ವೇದನೆ ಉಂಟಾದ್ದರಿಂದ  ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗೀತಮ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ  ಸ್ವಾತಿ ರೆಡ್ಡಿ  ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು.

ರೈಲು ಅನಕಪಲ್ಲಿ ನಿಲ್ದಾಣದಲ್ಲಿ ಹಾದುಹೋಗುತ್ತಿದ್ದಂತೆ ಉಳಿದ ಸಹ ಪ್ರಯಾಣಿಕರು ಮತ್ತು ಕುಟುಂಬ ಸದಸ್ಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

- Advertisement -

ಹೆರಿಗೆಯ ನಂತರ ಮಗು ಮತ್ತು ತಾಯಿ ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp