NCPCR- ಆರ್ರೆಸ್ಸೆಸ್ ನ ಅಂಗಸಂಸ್ಥೆಯಾಗಿ ಬದಲಾಗಿದೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿರುಗೇಟು

Prasthutha|

ನವದೆಹಲಿ: ಮಕ್ಕಳ ಹಕ್ಕುಗಳ ಸಂಘಟನೆಯಾದ NCPCR, ಆರ್ರೆಸ್ಸೆಸ್ ನ ಅಂಗಸಂಸ್ಥೆಯಾಗಿ ಬದಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಮಕ್ಕಳನ್ನು ರಾಜಕೀಯ ಸಾಧನಗಳನ್ನಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು NCPCR ಆರೋಪಸಿದ್ದು, ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ರಾಹುಲ್ ಗಾಂಧಿ ಭಾಗವಹಿಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಹಳಿತಪ್ಪಿಸುವ ಪ್ರಯತ್ನವನ್ನು ಆರ್ರೆಸ್ಸೆಸ್, ಮಕ್ಕಳ ಹಕ್ಕುಗಳ ಸಂಘಟನೆ ಮೂಲಕ ಮಾಡಲು ನೋಡುತ್ತಿದೆ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮನಮೋಹನ್ ಸಿಂಗ್ ಅವರ ಸರ್ಕಾರ ಆರಂಭಿಸಿದ ಎನ್ಸಿಪಿಸಿಆರ್ ಈಗ ಆರ್ರೆಸ್ಸೆಸ್ ನ ಅಂಗಸಂಸ್ಥೆಯಾಗಿ ಮಾರ್ಪಟ್ಟಿದೆ. ಭಾರತ್ ಜೋಡೋ ಯಾತ್ರೆಯನ್ನು ಹಳಿತಪ್ಪಿಸಲು ಕರುಣಾಜನಕ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.



Join Whatsapp