ಕಾಂಗ್ರೆಸ್ ನವರು ಚಡ್ಡಿ ಹಾಕಿ RSS ಶಾಖೆಯಲ್ಲಿ ಕೂರುವ ದಿನ ಹತ್ತಿರವಿದೆ: ಸಿ.ಟಿ ರವಿ

Prasthutha|

ಬೆಂಗಳೂರು: ಚಡ್ಡಿ ಸುಟ್ಟಿರುವ ಕಾಂಗ್ರೆಸ್ ನವರು ಚಡ್ಡಿ ಹಾಕಿ ಶಾಖೆಗೆ ಬರುವ ದಿನ ದೂರವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

- Advertisement -


ಖಾಕಿ ಚಡ್ಡಿ ಸುಡುವ ಚಿತ್ರವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿದ್ದು, ಇದಕ್ಕೆ ಬಿಜೆಪಿ, ಹಾಗೂ ಆರ್ ಎಸ್ ಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ, ಕಾಂಗ್ರೆಸ್ ನವರು ಟ್ವಿಟರ್ ನಲ್ಲಿ ಆರೆಸ್ಸೆಸ್ ಚಡ್ಡಿ ಸುಡುವ ಫೋಟೋ ಹಾಕಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಭಾರತ ಜೋಡೋ ಹೆಸರಿನಲ್ಲಿ ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp