ಸೊಳ್ಳೆ ನಿವಾರಕ ಹೊಗೆಗೆ ಮತಿ ತಪ್ಪಿದ ಮಹಿಳೆಯರು

Prasthutha|

ನೋಯ್ಡಾ: ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಕಂಪನಿಯಲ್ಲಿ ಸೊಳ್ಳೆ ನಿವಾರಕವನ್ನು ಸಿಂಪಡಿಸಿದ ಪರಿಣಾಮ ಹದಿನಾರು ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಗ್ರೇಟರ್ ನೋಯ್ಡಾದ ಎಕೋ ಟೆಕ್ 3 ಪ್ರದೇಶದಲ್ಲಿ ನಡೆದಿದೆ.

- Advertisement -

ಕಂಪೆನಿಯ ಹೊರಾವರಣದಲ್ಲಿ ಸೊಳ್ಳೆ ಹತೋಟಿಗಾಗಿ ನಿವಾರಕವನ್ನು ಸಿಂಪಡಿಸಿಲಾಗಿತ್ತು. ಔಷಧವು ಪ್ರಬಲ ಮಟ್ಟದಲ್ಲಿದ್ದರಿಂದ  ಕಟ್ಟಡದ ಒಳಗೆ ಕೆಲಸಮಾಡುತಿದ್ದ ಮಹಿಳೆಯರ ಮೇಲೆಪರಿಣಾಮ ಬೀರಿದ್ದು, ಅವರನ್ನು ಹತ್ತಿರದ ಹಾಲ್ದೊನಿ ಮೋಡ್ ನ ಆಸ್ಲೇಪಿಯಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಎಲ್ಲಾ ಮಹಿಳೆಯರ ಆರೋಗ್ಯವು ಉತ್ತಮವಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪಡೆದ ಪೋಲೀಸರು ಆಸ್ಪತ್ರೆಗೆ ಹೋಗಿ ಬಾಧಿತರನ್ನು ಮಾತನಾಡಿಸಿದ್ದು, ನಮಗೆ ಯಾವುದೇ ದೂರು ಬಂದಿಲ್ಲ. ಆದ್ದರಿಂದ ಸಾಮಾನ್ಯ ವಿಚಾರಣೆಯನ್ನಷ್ಟೆ ನಡೆಸಿದೆವು. ದೂರು ನೀಡಿದರೆ ಮಾತ್ರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಕೋ ಟೆಕ್ 3 ಪೋಲೀಸು ಠಾಣಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. 

- Advertisement -

ಆಸ್ಪತ್ರೆಗೆ ತಂದಾಗ ಕೆಲವರು ವಾಕರಿಕೆ, ತಲೆ ಸುತ್ತುವಿಕೆ ಹಾಗೂ, ಉಸಿರಾಡಲು ಒದ್ದಾಡುತ್ತಿರುವುದು ಕಂಡುಬಂತು. ಚಿಕಿತ್ಸೆಯ ಜೊತೆಗೆ ಆಮ್ಲಜನಕ ನೀಡಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದರು.



Join Whatsapp