ಏಷ್ಯಾ ಕಪ್‌ ಫೈನಲ್‌| ಪಾಕಿಸ್ತಾನ ಗೆಲುವಿಗೆ 171 ರನ್‌ ಗುರಿ

Prasthutha|

ದುಬೈ: ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ 170 ರನ್‌ಗಳಿಸಿದ್ದು, ಪಾಕಿಸ್ತಾನ ಗೆಲುವಿಗೆ ಸವಾಲಿನ ಗುರಿಯನ್ನು ಮುಂದಿಟ್ಟಿದೆ.

- Advertisement -

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ, ಭನುಕ ರಾಜಪಕ್ಷೆ ಗಳಿಸಿದ ಅರ್ಧಶತಕದ ನೆರವಿನಿಂದ 6 ವಿಕೆಟ್‌ ನಷ್ಟದಲ್ಲಿ 170 ರನ್‌ಗಳಿಸಿದೆ. ಕೊನೆಯ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ವನಿಂದು ಹಸರಂಗ 21 ಎಸೆತಗಳಲ್ಲಿ 1 ಸಿಕ್ಸರ್‌ ಮತ್ತು 5 ಬೌಂಡರಿಗಳ ನೆರವಿನಿಂದ 36 ರನ್‌ಗಳಿಸಿ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

2 ರನ್‌ಗಳಿಸುವಷ್ಟರಲ್ಲೇ ಲಂಕಾದ ಮೊದಲ ವಿಕೆಟ್ಚ ಪತನವಾಗಿತ್ತು. ಆರಂಭಿಕ ಕುಸಲ್‌ ಮೆಂಡಿಸ್‌, ಖಾತೆ ತೆರೆಯುವ ಮುನ್ನವೇ ನಸೀಮ್‌ ಶಾ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಮರಳಿದ್ದರು. 3ನೇ ಕ್ರಮಾಂಕದಲ್ಲಿ ಬಂದ ಧನಂಜಯ ಡಿಸಿಲ್ವಾ 28 ರನ್‌ಗಳಿಸಿದರು.

- Advertisement -

ಎದುರಾಳಿಯನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಬಹುದು ಎಂಬ ಯೋಜನೆಯಲ್ಲಿದ್ದ ಪಾಕಿಸ್ತಾನಕ್ಕೆ, ಮಧ್ಯಮ ಕ್ರಮಾಂಕದಲ್ಲಿ ಭನುಕ ರಾಜಪಕ್ಷೆ ಸವಾಲಾಗಿ ನಿಂತರು. 34 ಎಸೆತಗಳನ್ನು ಎದುರಿಸಿದ ರಾಜಪಕ್ಷೆ, ಮೂರುಭರ್ಜರಿ ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನಿಂದ 71 ರನ್‌ಗಳಿಸಿ ಅಜೇಯರಾಗುಳಿದರು.

ಪಾಕಿಸ್ತಾನದ ಪರ ಬೌಲಿಂಗ್‌ನಲ್ಲಿಹಾರಿಸ್‌ ರೌಫ್‌ 3 ವಿಕೆಟ್‌ ಪಡೆದರೆ, ನಸೀಮ್‌ ಶಾ, ಶಾಧಾಬ್‌ ಖಾನ್‌ ಹಾಗೂ ಇಫ್ತಿಖಾರ್‌ ಅಹ್ಮದದ್‌ ತಲಾ ಒಂದು ವಿಕೆಟ್‌ ಪಡೆದರು.



Join Whatsapp