370 ವಿಧಿ ಮರು ಸ್ಥಾಪಿಸಲಾಗಲ್ಲ, ಪೊಳ್ಳು ಭರವಸೆ ನೀಡಿ ಜನರನ್ನು ದಾರಿತಪ್ಪಿಸಬೇಡಿ: ಆಜಾದ್

Prasthutha|

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಇನ್ನು ಮುಂದೆ ಎಂದಿಗೂ ವಾಪಸ್ ಸಿಗುವುದಿಲ್ಲ. ಆ ಸ್ಥಾನಮಾನ ಮತ್ತೆ ತಂದು ಕೊಡುತ್ತೇನೆ ಎಂಬ ಪೊಳ್ಳು ಭರವಸೆಯನ್ನು ನಾನು ನೀಡುವುದಿಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.

- Advertisement -


ಬಾರಾಮುಲ್ಲಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ ಮತ್ತು 2 ವರ್ಷಗಳ ಹಿಂದೆ ಹಿಂತೆಗೆದುಕೊಳ್ಳಲಾದ ಸಂವಿಧಾನದ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. 370 ನೇ ವಿಧಿಯನ್ನು ವಾಪಸ್ ತರುವ ಕುರಿತು ಪೊಳ್ಳು ಭರವಸೆ ನೀಡುವುದಿಲ್ಲ. ಬೇರೆ ಯಾವುದೇ ರಾಜಕೀಯ ಪಕ್ಷಗಳು ಇದನ್ನು ಹೇಳಿದರೆ ನಂಬಬೇಡಿ ಎಂದು ಹೇಳಿದ್ದಾರೆ.



Join Whatsapp