ಮಹಿಳಾ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌| ಭಾರತಕ್ಕೆ 8ನೇ ಸ್ಥಾನ, ಆಸ್ಟ್ರೇಲಿಯಾ – ಚೀನಾ ಫೈನಲ್‌

Prasthutha|

ಬೆಂಗಳೂರು: 18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತ, ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವನ್ನು ಕಾಣದೆ ಭಾರತದ ಯುವತಿಯರು ನಿರಾಸೆ ಅನುಭವಿಸಿದ್ದಾರೆ.

- Advertisement -

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ – ಚೀನಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಶನಿವಾರ ನಡೆದ  ಸೆಮಿಫೈನಲ್‌ನಲ್ಲಿ ಚೀನಾ ತಂಡವು 54-51 ಅಂಕಗಳ ಅಂತರದಲ್ಲಿ ಬಲಿಷ್ಠ ಜಪಾನ್ ತಂಡವನ್ನು ಮಣಿಸಿತು. ಮೊದಲ ಸೆಮಿಫೈನಲ್‌ನಲ್ಲಿ ವಿಶ್ವ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಚೈನೀಸ್‌ತೈಪೆ ವಿರುದ್ಧ 70-61 ಅಂತರದ ಗೆಲುವು ಸಾಧಿಸಿತು.

ಇಂಡೊನೇಷ್ಯಾ ವಿರುದ್ಧದ ರೋಚಕ ಪಂದ್ಯದಲ್ಲಿಭಾರತ ತಂಡವು 45–48ರಿಂದ ನಿರಾಸೆ ಅನು ಭವಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಇಂಡೊನೇಷ್ಯಾ ಆಟಗಾರ್ತಿಯರು 15–5ರಿಂದ ಮುನ್ನಡೆ ಗಳಿಸಿದ್ದರು. ಆದರೆ ಎರಡನೇ ಕ್ವಾರ್ಟರ್‌ ಅಂತ್ಯದ ವೇಳೆಗೆ ಭಾರತ 27–22ರ ಮೇಲುಗೈ ಗಳಿಸಿತು. 3ನೇ ಕ್ವಾರ್ಟರ್‌ನಲ್ಲೂ 41–38ರಿಂದ ಮುನ್ನಡೆ ಉಳಿಸಿಕೊಂಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಪಂದ್ಯ 45–45ರಿಂದ ಸಮಬಲವಾಗಿದ್ದ ವೇಳೆ ಕೇವಲ 2 ಸೆಕೆಂಡು ಉಳಿದಿತ್ತು. ಈ ಹಂತದಲ್ಲಿ ಚುರುಕಿನ ಆಟವಾಡಿದ ಇಂಡೊನೇಷ್ಯಾ, ರೋಚಕ ಜಯ ದಾಖಲಿಸಿತು.

- Advertisement -

ಇದಕ್ಕೂ ಮೊದಲು ಲೀಗ್‌ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ (46-119), ಕೊರಿಯಾ ವಿರುದ್ಧ  (47-69), ಹಾಗೂ ನ್ಯೂಜಿಲೆಂಡ್‌ ವಿರುದ್ಧ (63-66)ಅಂಕಗಳ ಅಂತರದಲ್ಲಿ ಭಾರತ ಮುಗ್ಗರಿಸಿತ್ತು.  



Join Whatsapp